ಹಾಸನ: ಚಿನ್ನದ ಮೇಲೆ ಸಾಲ ಕೊಡಿಸುವುದಾಗಿ ಸಾರ್ವಜನಿಕರಿಂದ ಚಿನ್ನಾಭರಣ ಪಡೆದು ಮೋಸ ಮಾಡಲು ಯತ್ನಿಸಿದ್ದ ಆಸಾಮಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಮಂಜುನಾಥ್ ಬಂಧಿತ ಆರೋಪಿ. ಗಜಲಕ್ಷ್ಮಿ ಗೋಲ್‌್ಡ ಫೈನಾನ್‌್ಸ ಹೆಸರಿನಡಿ 2 ಕೆ.ಜಿ. ಚಿನ್ನ ಅಡಮಾನ ಇಟ್ಟುಕೊಂಡಿದ್ದ. ಹಾಸನ, ಚನ್ನರಾಯಪಟ್ಟಣ, ಗುಂಡ್ಲುಪೇಟೆಯ ವಿವಿಧ ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿಟ್ಟು ಶೇ. 5ರ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತಿದ್ದ. ಈತನ ಮೋಸದಾಟಕ್ಕೆ 139 ಜನರು ಮೋಸ ಹೋಗಿದ್ದು ಈಗಾಗಲೇ 97 ಜನರು ತಮ ಚಿನ್ನಾಭರಣ ವಾಪಸ್ ಪಡೆದಿದ್ದಾರೆ. ಇನ್ನು 42 ಜನರು ಬರಬೇಕಿದ್ದು ಚಿನ್ನ ಅಡವಿಟ್ಟ ಗ್ರಾಹಕರು ಹಾಸನ ನಗರ ಠಾಣೆಗೆ ಭೇಟಿ ನೀಡಿ ತಮ ಆಭರಣ ವಾಪಾಸ್ ಪಡೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶುಭನ್ವಿತಾ ಕೋರಿದ್ದಾರೆ.
filter: 0; fileterIntensity: 0.0; filterMask: 0; hdrForward: 0; highlight: true; sv:16.2.13.0.W30;
module: photo;hw-remosaic: false;touch: (0.27657425, 0.5942708);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40; 