Category: ಕ್ರೈಂ

ಆಟಿಕೆ ಸಾಮಾನು ತರಲು ನೀರಿಗಿಳಿದ ಇಬ್ಬರು ಮಕ್ಕಳ ದಾರುಣ ಅಂತ್ಯ

ಹಾಸನ: ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ದುಃಖದ ಘಟನೆ ಎಲ್ಲೆಡೆ ದಿಗ್ಭ್ರಮೆ ಮೂಡಿಸಿದೆ. ಕೃಷಿ ಹೊಂಡದಲ್ಲಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರಣಯ್ (7) ಮತ್ತು ನಿಶಾಂತ್ (5) ಎಂದು ಗುರುತಿಸಲಾಗಿದೆ. ಇವರ ಪೋಷಕರು…

ಅಡುಗೆ ಮಾಡಿಲ್ಲವೆಂದು ತಾಯಿಯನ್ನೇ ಕೊಂದ ಪಾಪಿ ಪುತ್ರ

ಹಾಸನ: ಆಲೂರು ತಾಲ್ಲೂಕಿನ ಕದಾಳುಚನ್ನಾಪುರ ಗ್ರಾಮದಲ್ಲಿ ತಾಯಿ–ಮಗನ ಜಗಳ ತಾಯಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಕುಡಿದು ಮನೆಗೆ ಬಂದಿದ್ದ ಸಂತೋಷ (19) ಅಡುಗೆ ಮಾಡಿಲ್ಲವೆಂದು ತಾಯಿ ಪ್ರೇಮ (45) ಅವರೊಂದಿಗೆ ಜಗಳಕ್ಕೆ ಇಳಿದಿದ್ದ. ಮಾತಿಗೆ ಮಾತು ಬೆಳೆದು ಕೋಪಗೊಂಡ ಸಂತೋಷ ದೊಣ್ಣೆಯಿಂದ…

ಹಳೇ ಆಲೂರು ಸ್ಫೋಟ ಪ್ರಕರಣ: ಗಾಯಾಳು ದಂಪತಿ ಸಾವು

ಹಾಸನ: ಹಳೇಆಲೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುದರ್ಶನ್ (32) ಮತ್ತು ಪತ್ನಿ ಕಾವ್ಯ (27). ದಂಪತಿಯನ್ನು ಗಾಯಗೊಂಡ ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ…

ವಾಸದ ಮನೆಯಲ್ಲಿ ನಿಗೂಢ ಸ್ಫೋಟ: ದಂಪತಿಗೆ ಗಂಭೀರ ಗಾಯ

ಹಾಸನ: ವಾಸದ ಮನೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಿಂದ ದಂಪತಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಲೂರು ತಾಲ್ಲೂಕಿನ ಹಳೆಯ ಆಲೂರು ಗ್ರಾಮದಲ್ಲಿ ನಡೆದಿದೆ. ಸುದರ್ಶನ್ ಆಚಾರ್ (32) ಹಾಗೂ ಪತ್ನಿ ಕಾವ್ಯ (27) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು…

ಸಾರಿಗೆ ಬಸ್-ಬೈಕ್ ಭೀಕರ ಡಿಕ್ಕಿ – ಮೂವರು ಯುವಕರ ಸಾವು

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಎಡೇಗೌಡನಹಳ್ಳಿ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಯುವಕರು ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದೆ. KA-03 KS-3630 ನಂಬರ್‌ನ ಬೈಕ್‌ನಲ್ಲಿ ತೆರಳುತ್ತಿದ್ದ ಇರ್ಫಾನ್ (25), ತರುಣ್ (26)…

ಸಕಲೇಶಪುರ: ಅಕ್ರಮವಾಗಿ ಸಾಗಿಸುತ್ತಿದ್ದ ಮರಗಳ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು

ಸಕಲೇಶಪುರ: ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ನಡೆದಿದೆ.‌ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಎರಡು ಗೂಡ್ಸ್ ವಾಹನಗಳಲ್ಲಿ ಯಾವುದೇ ಪರವಾನಿಗೆ ಪಡೆಯದೆ ತರಕಾರಿ ಸಾಗಾಟ ಮಾಡುವ…

ಚೆನ್ನಾಗಿದ್ದ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಬಿಟ್ರಾ ಹಿಮ್ಸ್ ಮೂಳೆ ತಜ್ಞ?

ಹಾಸನ: ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಬೇಕಿದ್ದ ವೈದ್ಯರು, ತಪ್ಪಾಗಿ ಬಲಗಾಲು ಕುಯ್ದ ಘಟನೆ ನಗರದ ಹಿಮ್ಸ್ ನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ ಎಂಬುವವರು, ಸುಮಾರು ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಎಡಗಾಲಿಗೆ…

ಚಿತ್ರಕಲಾ ಶಿಕ್ಷಕ ಬಿ.ಎಸ್. ದೇಸಾಯಿ ಅವರ ಸೊಸೆ ಅಪಘಾತದಲ್ಲಿ ನಿಧನ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಆರ್ಟಿಸ್ಟ್ ಶಶಿಕಿರಣ ದೇಸಾಯಿ ಅವರ ಪತ್ನಿ ಕಲ್ಪನಾ ನಗರದ ನಂದಿನಿ ಲೇಔಟ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಸನದ ಚಿತ್ಕಲಾ ಫೌಂಡೇಶನ್ ಅಧ್ಯಕ್ಷ, ಚಿತ್ರಕಲಾವಿದ ಬಿ.ಎಸ್. ದೇಸಾಯಿ ಅವರ ಸೊಸೆ ಕಲ್ಪನಾ ಮಗಳು ಡಿಂಪನಾ (4)ಸೇರಿದಂತೆ…

ಪದವಿ ವಿದ್ಯಾರ್ಥಿ ಬಲಿ ಪಡೆದ ಸೋಷಿಯಲ್ ಮಿಡಿಯಾ ಹಾವಳಿ

ಹಾಸನ: ನಗರದ ಮಹಾರಾಜ ಪಾರ್ಕ್‌ನಲ್ಲಿ ಕಾಲೇಜು ಸ್ನೇಹಿತೆಯರೊಂದಿಗೆ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಲ್ಲೇನಹಳ್ಳಿಯಲ್ಲಿ ಗುರುವಾರ ನಡೆದಿದೆ. ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ…

ಹಾಸನ: ಅಪ್ರಾಪ್ತನಿಂದ ಮಹಿಳೆಯ ಬರ್ಬರ ಹತ್ಯೆ

ಹಾಸನ: ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮೀನಾಕ್ಷಮ್ಮ (43) ಕೊಲೆಯಾದ ಮಹಿಳೆ. ಮೃತರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತನೊಂದಿಗೆ ಮೀನಾಕ್ಷಮ್ಮನಿಗೆ ಇತ್ತೀಚೆಗೆ ಜಗಳ ಸಂಭವಿಸಿತ್ತು. ಸೆಪ್ಟೆಂಬರ್ 15ರಂದು ಮತ್ತೆ ಇಬ್ಬರ ನಡುವೆ…