ಹಾಸನ: ಮುರಿದು ಹಾಕ್ಬಿಡು ಅತ್ಲಾಗಿ ಇಲ್ಲಿ ಯಾವನ್ ಹೇಳಿದ್ದು ಸಿಸಿಟಿವಿ ಕ್ಯಾಮರಾ ಹಾಕೋಕೆ…ಹಾಸನ ಮಹಾನಗರ ಪಾಲಿಕೆ ಇಂಜಿನಿಯರ್ ಒಬ್ಬರ ದರ್ಪದ ಮಾತು ಇದಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಮಾಡಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಿರುಗಿಸಿರುವ ದೃಶ್ಯ ಲಭ್ಯವಾಗಿದೆ.
ಭ್ರಷ್ಟಾಚಾರ ನಿಗ್ರಹಕ್ಕೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಎಲ್ಲಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿದ್ದರು. ಆದರೆ, ಒಂದು ಕಡೆ ಕಾರ್ಯನಿರ್ವಹಿಸುತ್ತಿದ್ದ ಕ್ಯಾಮೆರಾವನ್ನು ಸಿಬ್ಬಂದಿಯೊಬ್ಬರು ಬೇರೆ ದಿಕ್ಕಿಗೆ ತಿರುಗಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಪಾಲಿಕೆಯ ಒಳಗೆ ಏನು ನಡೆಯುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕ್ಯಾಮೆರಾ ದಿಕ್ಕು ಬದಲಾವಣೆಯ ಹಿಂದೆ ಉದ್ದೇಶ ಏನು?
ಯಾರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು?
ಈ ಕುರಿತು ಮೇಲಾಧಿಕಾರಿಗಳು ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತನ್ನ ಅಧೀನ ಸಿಬ್ಬಂದಿಯನ್ನು ಕರೆದ ಇಂಜಿನಿಯರ್ ನಿನ್ನೆನೆ ತೆಗೆದು ಹಾಕೋಕೆ ಹೇಳಿದ್ದೆ, ಮುರಿದು ಹಾಕು ಅದನ್ನ ಯಾವನು ಹಾಕೋಕೆ ಹೇಳಿದ್ದು ಗುಟುರು ಹಾಕಿರುವ ವಿಡಿಯೋ ಲಭ್ಯವಾಗಿದೆ.
