Category: ಜಿಲ್ಲಾ

ಹಾಸನ ಮಹಾನಗರ ಪಾಲಿಕೆಗೆ ಕಂದಾಯ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ಬಿಗ್‌ ಶಾಕ್‌

ಹಾಸನ: ಮಹಾನಗರ ಪಾಲಿಕೆಯಿಂದ ಬಾಕಿ ಕಂದಾಯ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳಲಾಗಿದ್ದು ನಗರದ ಪೆಟ್ರೋಲ್‌ ಬಂಕ್‌ ಕಚೇರಿಗೆ ಬೀಗ ಜಡಿಯಾಗಲಿದೆ. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ನೇತೃತ್ವದಲ್ಲಿ ನಗರದ ಸಾಲಗಾಮೆ ರಸ್ತೆಯಲ್ಲಿರುವ ಶ್ರೇಯಸ್‌‍ ಪೆಟ್ರೋಲ್‌ ಬಂಕ್‌ಗೆ ಬೀಗ ಹಾಕಲಾಯಿತು. ಕಳೆದ ಐದು ವರ್ಷಗಳಿಂದ…

ಸಾಲಬಾಧೆಗೆ ಹೆದರಿ ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು

ಅರಕಲಗೂಡು: ಸಾಲಬಾಧೆ ತಾಳಲಾರದೆ ಜ. 6 ರಂದು ವಿಷ ಸೇವಿಸಿದ್ದ ತಾಲ್ಲೂಕಿನ ಕೊಣನೂರು ಹೋಬಳಿಯ ವೆಂಕಟೇಶ್ವರ ಗ್ರಾಮದ ರೈತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರೈತ ರಾಜೇಗೌಡ (60) ಮೃತರು. ಸಿದ್ದಾಪುರ ಗೇಟ್‌ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸುಮಾರು 5 ಲಕ್ಷ ರೂ.…

ಕಾಡಾನೆ ದಾಳಿಗೆ ಮಹಿಳೆ ಬಲಿ: ಕೂದಲೆಳೆ ಅಂತರದಲ್ಲಿ ಪಾರಾದ ವೃದ್ಧೆ

ಸಕಲೇಶಪುರ: ತಾಲೂಕಿನ ಮೂಗಲಿಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ಮೂಗಲಿ ಗ್ರಾಮದ ಶೋಭಾ (40) ಮೃತ ಮಹಿಳೆ. ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಆನೆಯ ತುಳಿತಕ್ಕೆ ಆಕೆ ಬಲಿಯಾಗಿದ್ದಾರೆ. ಈಚೆಗೆ ಕೊಡಗಿನಿಂದ ಬಂದಿರುವ ಆಕ್ರಮಣಕಾರಿಯಾಗಿ…

ಅರಕಲಗೂಡು: ಸ್ವಂತ ಖರ್ಚಿನಲ್ಲಿ ಬೋರವೆಲ್ ಕೊರೆಸಿ ಮಕ್ಕಳ ನೀರಿನ ದಾಹ ತಣಿಸಿದ ಸರ್ಕಾರಿ ಶಾಲೆ ಶಿಕ್ಷಕಿ

ಅರಕಲಗೂಡು: ತಾಲ್ಲೂಕಿನ ಸಂತೆ ಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ಸ್ವಂತ ಹಣದಲ್ಲಿ ಶಾಲೆಗೆ ಬೋರ್‌ವೆಲ್‌ ಕೊರೆಯಿಸಿ ಸೇವಾ ಸಾರ್ಥಕತೆಯನ್ನು ಕಂಡು ಕೊಂಡಿದ್ದಾರೆ. ಇದು ಇತರೆ ಶಿಕ್ಷಕರಿಗೆ ಅಂತಃಕರಣ ಎಂದು ಭಾವಿಸಬೇಕಾ ಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ…

ಯಗಚಿ ನಾಲೆಯಲ್ಲಿ ಮಹಿಳೆ ಶವ ಪತ್ತೆ, ಸಾಕ್ಷ್ಯ ನಾಶಕ್ಕಾಗಿ ಪತಿ ಮಾಡಿದ ಯೋಜನೆ ಪ್ಲಾಪ್

ಆಲೂರು: ಕೌಟುಂಬಿಕ ಕಹಲದಿಂದ ಹೆಂಡತಿಯಿಂದ ದೂರವಾಗಿದ್ದ ಪತಿ ಕುಡಿದ ಅಮಲಿನಲ್ಲಿ ಆಕೆಯನ್ನು ಕೊಂದು ಸಾಕ್ಷ್ಯ ನಾಶಕ್ಕಾಗಿ ಶವವನ್ನು ಯಗಚಿ ನದಿಗೆ ಎಸೆದಿರುವ ಘಟನೆ ನಡೆದಿದೆ. ತಾಲ್ಲೂಕಿನ ಯಡೂರು ನಿವಾಸಿ ರಾಧಾ (40) ಮೃತ ದುರ್ದೈವಿ. ಪತಿ ಕುಮಾರ್‌ ಹತ್ಯೆಗೈದು ನಾಪತ್ತೆಯಾಗಿದ್ದಾನೆ. 22…

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನ ಚಿಕಿತ್ಸೆಗಾಗಿ ನೆರವಿಗೆ ಮೊರೆ

ಹಾಸನ: ದಿಢೀರ್ ಕಿಡ್ನಿ ವೈಫಲ್ಯದಿಂದ ತಮ್ಮ ಮಗನ ಆರೋಗ್ಯದಲ್ಲಿ ಏರುಪೇರಾಗಿದ್ದು ಶಸ್ತ್ರ ಚಿಕಿತ್ಸೆಗಾಗಿ ದಾನಿಗಳು ಹಣಕಾಸು ನೆರವು ನೀಡಬೇಕೆಂದು ಆಲೂರು ತಾಲ್ಲೂಕು ರಾಯರಕೊಪ್ಪಲು ಗ್ರಾಮದ ಜ್ಯೋತಿ ಕೋರಿದರು. ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, 27 ವರ್ಷದ ಪುತ್ರ ವಿಶ್ವಾಸ್ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದೆ. ನಮಗೆ…

ಕೌಟುಂಬಿಕ ಕಲಹ: ತಂದೆಯನ್ನು ಹತ್ಯೆಗೈದ ಪುತ್ರ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಕಬ್ಬಿಣದ ರಾಡ್ ನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ನಡೆದಿದೆ. ಹಿರೀಸಾವೆ ಕೆರೆ ಬೀದಿ ನಿವಾಸಿ ಸತೀಶ್ ಮೃತ ದುರ್ದೈವಿ. ಪುತ್ರ ರಂಜಿತ್ ಕೊಲೆ ಆರೋಪಿ. ಸತೀಶ್ ಹಾಗೂ ಪತ್ನಿ…

223 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ: ಎತ್ತಿನಹೊಳೆ ಯೋಜನಾ ಮುಖ್ಯ ಕಚೇರಿಗೆ ಪವರ್ ಕಟ್ ಶಾಕ್

ಸಕಲೇಶಪುರ: ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಕಚೇರಿ, ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಪರಿಣಾಮ ವಿದ್ಯುತ್ ಸರಬರಾಜು ಕಡಿತಗೊಂಡು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿದೆ. ನೀರು ಹರಿಸಲು ವಿದ್ಯುತ್‌ಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ. 2024…

ಹೊಳೆನರಸೀಪುರ ತಾ.ಪಂ. ಕಟ್ಟಡಕ್ಕೆ 2.40 ಕೋಟಿ ರೂ. ಹೆಚ್ಚುವರಿ ಅನುದಾನ

ಹೊಳೆನರಸೀಪುರ: ಪಟ್ಟಣದಲ್ಲಿ ನೂತನ ತಾಲ್ಲೂಕು ಪಂಚಾಯಿತಿ ಕಟ್ಟಡ ಕಾಮಗಾರಿಗೆ ಹೆಚ್ಚುವರಿ 2.40 ಕೋಟಿ ರೂ. ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದು, ಸಂಸದ ಶ್ರೇಯಸ್‌‍ ಪಟೇಲ್‌ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. 2021-22ರ ಅವಧಿಯಲ್ಲಿ ಕಾಮಗಾರಿಗೆ…

ಮಾಜಿ ಶಾಸಕ ಎಟಿಆರ್ ಅಭಿನಂದನಾ ಗ್ರಂಥ: ಜ. 10ಕ್ಕೆ ಪೂರ್ವಭಾವಿ ಸಭೆ

ಅರಕಲಗೂಡು: ಮಾಜಿ ಶಾಸಕ, ಪರಿಸರಕ್ಕಾಗಿ ನಾವು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಅವರ ಅಭಿನಂದನಾ ಗ್ರಂಥ ಹೊರತರಲು ಮೈಸೂರಿನ ಎ.ಟಿ.ರಾಮಸ್ವಾಮಿ ಅಭಿನಂದನಾ ಗ್ರಂಥ ಸಮಿತಿ ನಿರ್ಧರಿಸಿದ್ದು, ಆ ಬಗ್ಗೆ ಚರ್ಚಿಸಲು ಜ. ೧೦ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ತಾಲ್ಲೂಕಿನ ಮುದ್ದನಹಳ್ಳಿಯ…