Category: Uncategorized

ಹೃದಯಾಘಾತ: ಹಾಸನದಲ್ಲಿ ಒಂದೇ ದಿನ ಮೂವರ ಸಾವು

ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಕರ್ತವ್ಯದಲ್ಲಿದ್ದ ಯೋಧ ಸೇರಿ ಮೂವರು ಮೃತಪಟ್ಟಿದ್ದು, ಅವರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆಲೂರು ತಾಲ್ಲೂಕಿನ ಹಾಂಜಿಹಳ್ಳಿ ಗ್ರಾಮದ ಮಧು.ಹೆಚ್.ಹೆಚ್. (34) ಅವರು ಅಸ್ಸಾಂನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ…

ಹೃದಯಾಘಾತದಿಂದ ಬಿಇಒ ಕಚೇರಿ ಸೂಪರಿಂಟೆಂಡೆಂಟ್ ನಿಧನ

ಹಾಸನ: ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯ ಸೂಪರಿಂಟೆಂಡೆಂಟ್ ವೇಣುಗೋಪಾಲ್ ರಾವ್ (46) ಶುಕ್ರವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾರ್ವಜನಿಕ ಶಿಕ್ಷಣ…

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ಹಾಸನ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಾ ಗ್ರಾಮದಲ್ಲಿ ಶಾಂತಿಗೆ ಭಂಗ ತರುವುದನ್ನು ಖಂಡಿಸಿ ಬುದ್ದಿವಾದ ಹೇಳಿದ್ದಕ್ಕೆ ಊರಿನ ಹಿರಿಯನನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಬೇಲೂರು ತಾಲ್ಲೂಕು ವಡ್ಡರಹಳ್ಳಿ ಕೊಪ್ಪಲು ಗ್ರಾಮದ ಯಶವಂತ ಅಪರಾಧಿ. ಅದೇ…

ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೆ ಕೇಸ್‌‍ಗೆ ರೋಚಕ ಟ್ವಿಸ್ಟ್

ಹಾಸನ: ಜಿಲ್ಲಾ ಕಾರಾಗೃಹದಲ್ಲಿ ಆ. 28ರ ಶುಕ್ರವಾರ ವಿಚಾರಣಾಧೀನ ಖೈದಿಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಡಿಎಸ್‌‍ಬಿಯಿಂದ ಮಾಧ್ಯಮಗಳಿಗೆ ಕಳುಹಿಸಿದ್ದ ಮಾಹಿತಿಯಲ್ಲಿ ವಿಚಾರಣಾಧೀನ ಖೈದಿಗಳಾದ ಮೋಹನಕುಮಾರ್‌ ಹಾಗು ರಂಗಸ್ವಾಮಿ ದೂರವಾಣಿ ಕರೆ ವಿಚಾರವಾಗಿ ಹೊಡೆದಾಡಿಕೊಂಡು ಜಗಳ ಬಿಡಿಸಲು…

ಹಾಸನ ಮೂಲದ ಮಹಿಳೆ ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ: ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆದು ಸ್ವಾವಲಂಬನೆ ಜೀವನ ನಡೆಸುತ್ತಿರುವ ಹಾಸನ ಮೂಲದ ಮಹಿಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ 137 ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬೀದಿ ಬದಿ ಹೋಟೆಲ್‌ ನಡೆಸುತ್ತಿರುವ…

ಸಕಲೇಶಪುರ, ಬೇಲೂರು, ಆಲೂರು ತಾಲೂಕನ್ನೂ ಬರಪೀಡಿತ ಪಟ್ಟಿಗೆ ಸೇರಿಸಿ*

ಹಾಸನ: ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಮೂರುವರೆ ತಿಂಗಳು ಸಮಯ ತೆಗೆದುಕೊಂಡಿದೆ. ಆದರೂ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಕೈ ಬಿಡಲಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 101ರಲ್ಲಿ 89 ತಾಲೂಕು ತೀವ್ರ,…

ಸಕಲೇಶಪುರದಲ್ಲಿ ಬೆಳ್ಳಂ ಬೆಳಿಗ್ಗೆ ಜೆಸಿಬಿ ಸದ್ದು

ಸಕಲೇಶಪುರ: ಪಟ್ಟಣದ ತೇಜಸ್ವಿ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದ ಫುಟ್‌ಪಾತ್ ಒತ್ತುವರಿಗಳನ್ನು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸಿದರು. ತೇಜಸ್ವಿ ವೃತ್ತದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ವೃತ್ತದ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ…

ಹಾಸನ ಜಿಲ್ಲೆಯ ಪಿಎಸ್‌‍ಐಗಳ ವರ್ಗಾವಣೆ

ಹಾಸನ: ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌‍ಐಗಳನ್ನು ವರ್ಗಾವಣೆ ಮಾಡಲಾಗಿದೆ. ಶಾಂತಿಗ್ರಾಮ ಠಾಣೆಯ ಅರುಣ್‌ ಅವರನ್ನು ಗಂಡಸಿ, ದುದ್ದ ಠಾಣೆಯ ಎಂ.ಟಿ.ಅಂತಿಮ ಅವರನ್ನು ಶಾಂತಿಗ್ರಾಮ, ಸೆನ್‌ ಠಾಣೆಯ ಜಿ.ಜತೇಂದ್ರಕುಮಾರ್‌-ದುದ್ದ, ಹಿರೀಸಾವೆ ಠಾಣೆಯ ರೂಪಾದೇವಿ ಬಿರಾದಾರ್‌-ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ, ಚ.ರಾ.ಪಟ್ಟಣ ಗ್ರಾಮಾಂತರ ಠಾಣೆಯ ಎಲ್‌.ಸಂತೋಷ್‌…

ನೆರವಿನ ಹೆಸರಲ್ಲಿ ರೈತರಿಗೆ ಮಹಾ ಮೋಸ ಮಾಡಿದ ಶಂಕರಪ್ಪ

ಹಳೇಬೀಡು: ಹೈನುಗಾರಿಕೆ, ಕೃಷಿ ಪರಿಕರ ಖರೀದಿ, ರಸಗೊಬ್ಬರ ಮಾರಾಟಕ್ಕೆ ಪರವಾನಗಿ ಸೇರಿ ಕೃಷಿ ಸಂಬಂಧಿತ ಕೆಲಸ ಮಾಡಿಕೊಡುವುದಾಗಿ ನಕಲಿ ಗುರುತಿನ ಚೀಟಿಯೊಂದಿಗೆ ಬೇಲೂರು ತಾಲ್ಲೂಕಿನ ರೈತರಿಗೆ ಸುಮಾರು 1.5 ಕೋ.ರೂ. ಪಂಗನಾಮ ಹಾಕಿರುವ ಆಸಾಮಿಯನ್ನು ರೈತರೇ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ…

ಹೆದ್ದಾರಿಯಿಂದ ಕಾರು ಹಾರಿದ ಪ್ರಕರಣ: ಗಾಯಾಳು ಸ್ಥಿತಿ ಗಂಭೀರ

ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಕ್ರೆಟಾ ಕಾರೊಂದು ರಾಷ್ಟ್ರೀಯ ಹೆದ್ದಾರಿ 75ರ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದು, ರೈತರ ಹೊಲಕ್ಕೆ ಹಾರಿ ಬಿದ್ದ ಘಟನೆ ಆಲೂರು ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಗಂಭೀರವಾಗಿ…