ಹಾಸನ: ಶ್ರೀಮತಿ ಚನ್ನಮ್ಮ ಅವರ ಅಂತ್ಯಕ್ರಿಯೆ ವೇಳೆ ರಾಜ್ಯ ಸರ್ಕಾರ ನೀಡಿದ ಗೌರವ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಹೇಳದೇ ಇರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಪಡಿಸಿದರು.

ನಿನ್ನೆ ನಾನು ಮೈಕ್ ಹಿಡಿದಿದ್ದು ಜನರು ಸಮಾಧಾನದಿಂದ ಇರಬೇಕು ಎಂದು ಹೇಳುವುದಕ್ಕಾಗಿ. ಆ ಸಂದರ್ಭದಲ್ಲಿ ನಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ಕೇಂದ್ರ ಸಚಿವರ ಹೆಸರನ್ನು ಉಲ್ಲೇಖಿಸಿ, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೇಳಲಿಲ್ಲ ಎಂದು ಕೆಲವರು ಮಾತನಾಡಿರುವುದು ನನ್ನ ಕಿವಿಗೆ ಬಿದ್ದಿದೆ. ಆದರೆ, ನಾನು ಉದ್ದೇಶಪೂರ್ವಕವಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೇಳದೇ ಇರಲಿಲ್ಲ. ಈ ವಿಚಾರದಲ್ಲಿ ಯಾರೂ ತಪ್ಪು ತಿಳಿಯಬಾರದು ಎಂದು ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ ಎಂದರು.
ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬಂದರೂ ಒಗ್ಗಟ್ಟಾಗಿ ಬದುಕಬೇಕು ಎಂಬುದು ನಮ್ಮ ಕುಟುಂಬದ ಸಂದೇಶ. ಪ್ರತಿದಿನ ನಾವು ಸಂಬಂಧಗಳ ಅರ್ಥವನ್ನು ಕಳೆದುಕೊಳ್ಳುತ್ತಿದ್ದೇವೆ. ಜೀವನದಲ್ಲಿ ತಪ್ಪಾದಾಗ ಪಶ್ಚಾತ್ತಾಪಪಟ್ಟು ಅದನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ಪ್ರತಿಯೊಂದು ಕುಟುಂಬವೂ ಮಾಡಬೇಕು. ಇದೇ ನಾಡಿನ ಜನತೆಯ ಆಶಯವೂ ಆಗಿರಬಹುದು ಎಂದು ಹೇಳಿದರು.

Leave a Reply

Your email address will not be published. Required fields are marked *