ವೈದ್ಯಕೀಯ ನಿರ್ಲಕ್ಷ್ಯ: ಡಾ. ಚೈತನ್ಯಗೆ 2 ತಿಂಗಳು ಅಮಾನತು ಶಿಕ್ಷ
ಹಾಸನ: ಹಾಸನದ ಎನ್‌ಡಿಆರ್‌ಕೆ ಆಸ್ಪತ್ರೆಯಲ್ಲಿ 2018ರಲ್ಲಿ ನಡೆದ ಮೆದುಳಿನ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಪರಿಶೀಲಿಸಿರುವ ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC), ನ್ಯೂರೋಸರ್ಜನ್ ಡಾ. ಶ್ರೀ ಚೈತನ್ಯ ಆರ್.ಎಸ್. ವಿರುದ್ಧ ವೃತ್ತಿಪರ ದುರ್ನಡತೆ (Professional Misconduct) ಹಾಗೂ ವೈದ್ಯಕೀಯ ನಿರ್ಲಕ್ಷ್ಯ (Medical Negligence) ಸಾಬೀತಾಗಿದೆ ಎಂದು ತೀರ್ಮಾನಿಸಿದೆ.
ಪರಿಣಾಮವಾಗಿ ವೈದ್ಯರ ಹೆಸರನ್ನು 2 ತಿಂಗಳ ಕಾಲ ವೈದ್ಯಕೀಯ ನೋಂದಣಿ ಪಟ್ಟಿಯಿಂದ ಅಮಾನತುಗೊಳಿಸುವಂತೆ ಆದೇಶಿಸಿದೆ.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಎನ್‌ಡಿಆರ್‌ಕೆ ಆಸ್ಪತ್ರೆ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರಾಧಿಕಾರ (KPMEA) ಹಾಸನಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.
