ಹಾಸನ: ಹೊಳೆನರಸೀಪುರ ವಿಧಾನಸಭೆ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಹಾಗು ಮಾಜಿ ಪತಿ ಸುಂದರೇಶ್ ಅವರು ತನ್ನ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಮಾತ್ರವಲ್ಲದೆ ಜೀವ ಬೆದರಿಕೆ ಹಾಕಿದ್ದಾರೆಂದು ಮಹಿಳಾ ಧ್ವನಿ ಸಂಘದ ರಾಜ್ಯಾಧ್ಯಕ್ಷೆ ಅನ್ನಪೂರ್ಣಗೌಡ ಅವರು ಎಫ್‌ಐಆರ್ ದಾಖಲಿಸಿದ್ದಾರೆ.
ಹಲವು ದಿನಗಳಿಂದ ದೇವರಾಜೇಗೌಡ ಹಾಗು ಅನ್ನಪೂರ್ಣಗೌಡ ವಿರುದ್ಧ ಮಾತಿನ ವಾಕ್ಸಮರ ಜೋರಾಗಿದೆ. ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಅನ್ನಪೂರ್ಣಗೌಡ ವಿರುದ್ಧ ದೇವರಾಜೇಗೌಡ ಅವರು ಲಘುವಾಗಿ ಮಾತನಾಡಿದ್ದರು. ಅದಾದ ಬಳಿಕ ಅವರ ಮಾಜಿ ಪತಿ ಸುಂದರೇಶ್ ಕೂಡ ವಿಡಿಯೋ ಮೂಲಕ ತನ್ನ ಚಾರಿತ್ರ್ಯವಧೆ ಮಾಡಿದ್ದಾರೆಂದು ಅನ್ನಪೂರ್ಣಗೌಡ ಆರೋಪಿಸಿದ್ದಾರೆ.
ಫೆ. 12ರಂದು ಪೊಲೀಸ್ ಠಾಣೆಗೆ ಬಂದಿದ್ದಾಗ ದೇವರಾಜೇಗೌಡರು ಕೊಲೆ ಬೆದರಿಕೆ ಹಾಕಿದ್ದಾರೆ. ಈ ಇಬ್ಬರಿಂದ ನನಗೆ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡಬೇಕು ಹಾಗು ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
