ಹಾಸನ: ತಾಲ್ಲೂಕಿನ ಕಲ್ಕೆರೆ ಬಳಿ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆ ಎಸೆದು ನಿಗೂಢ ಕಣ್ಮರೆಯಾಗಿದ್ದ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಫೆ. 12ರಂದು ಚಿಕ್ಕಮಗಳೂರಿನ ಸಂಬಂಧಿಕರ ಮದುವೆಗೆ ಬಂದಿದ್ದ ಕುಣಿಗಲ್ ತಾಲ್ಲೂಕು ಯಲಿಯೂರು ಗ್ರಾಮದ ಪ್ರಿಯಾಂಕ ಬದುಕಿದ್ದು, ಈ ಸುದ್ದಿ ರೋಚಕ ತಿರುವು ಪಡೆದಿದೆ. ಎರಡು ದಿನಗಳಿಂದ ಆಕೆ ನಾಪತ್ತೆಯಾಗಿದ್ದು ಮಾತ್ರವಲ್ಲದೆ ಕೆರೆ ಸಮೀಪ ಬಟ್ಟೆ ಕಾಣಿಸಿದ್ದರಿಂದ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಆ ಮಹಿಳೆಯೇ ತಾನು ಕೊಲೆಯಾಗಿದ್ದೇನೆಂದು ಬಿಂಬಿಸಿಕೊಳ್ಳಲು ಈ ಷಡ್ಯಂತ್ರ ಮಾಡಿದ್ದಳು. ಅದಕ್ಕೆ ಮುಖ್ಯ ಕಾರಣ ಪ್ರಿಯಕರ ಎಂಬುದು ಗೊತ್ತಾಗಿದೆ.
ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದ ಆಕೆ ಆತನೊಂದಿಗೆ ಸಂಸಾರ ಮಾಡಲು ಈ ಷಡ್ಯಂತ್ರ ಹೆಣೆದಿದ್ದಳು. ಈ ಪ್ರಕರಣ ಇಡೀ ಜಿಲ್ಲೆಯಲ್ಲಿ ಹಲ್ ಚಲ್ ಎಬ್ಬಿಸಿತ್ತು. ಹಾಸನ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಳಿಗ್ಗೆಯಿಂದ ಕೆರೆಯಲ್ಲಿ ಶವಕ್ಕಾಗಿ ಶೋಧ ನಡೆಸಿದರು. ಆದರೆ ಇಲ್ಲಿ ಆಗಿರುವುದೇ ಬೇರೆ. ಸದ್ಯ ಪ್ರಿಯಾಂಕ ಪ್ರಿಯಕರೊಂದಿಗೆ ಕುಣಿಗಲ್ ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *