ಸಕಲೇಶಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಶಾಸಕ ಸಿಮೆಂಟ್ ಮಂಜು ಮಾನವೀಯತೆ ಮೆರೆದಿದ್ದಾರೆ.
ಸಕಲೇಶಪುರದಿಂದ ಆಲೂರು ಕಡೆಗೆ ತೆರಳುತ್ತಿದ್ದ ವೇಳೆ ಪಟ್ಟಣದ ಬಾಳೆಗದ್ದೆ ಸಮೀಪ ರಸ್ತೆ ದಾಟುತ್ತಿದ್ದ ಹೌಸಿಂಗ್ ಬೋರ್ಡ್ ನಿವಾಸಿ ಸಿದ್ದರಾಜು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಘಟನೆ ಗಮನಿಸಿದ ಶಾಸಕ ಸಿಮೆಂಟ್ ಮಂಜು ತಕ್ಷಣ ಕಾರಿನಿಂದ ಇಳಿದು ಪರಿಸ್ಥಿತಿ ಪರಿಶೀಲಿಸಿದರು. ಅಂಬುಲೆನ್ಸ್ ಬರುವುದಕ್ಕೆ ವಿಳಂಬವಾಗುವ ಸಾಧ್ಯತೆ ಕಂಡು ಗಾಯಾಳುವನ್ನು ತಮ್ಮದೇ ಕಾರಿನಲ್ಲಿ ಕ್ರಾಫರ್ಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ಕೊಡಿಸಿದರು.
ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಗಾಯಾಳುವನ್ನು ಹಾಸನ ಆಸ್ಪತ್ರೆಗೆ ರವಾನಿಸಲಾಯಿತು.

Leave a Reply

Your email address will not be published. Required fields are marked *