ಹಾಸನ: ಮನೆ ಕಳ್ಳತನಕ್ಕೆ ಬಂದಿದ್ದ ಕಿಡಿಗೇಡಿಗಳು ಮಹಿಳೆಯೊಬ್ಬರ ಕಿರುಚಾಟಕ್ಕೆ ಎಚ್ಚೆತ್ತು ಬರಿಗೈಯಲ್ಲಿ ವಾಪಾಸ್‌‍ ಹೋಗಿದ್ದು, ಕಳ್ಳತನಕ್ಕೆ ತಂದಿದ್ದ ಡ್ರ್ಯಾಗನ್‌ಗಳನ್ನು ಅಲ್ಲೇ ಎಸೆದು ಹೋಗಿರುವ ಘಟನೆ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ನಡೆದಿದೆ.
ಸಂತೋಷ್‌ ಎಂಬುವವರ ಮನೆಗೆ ಶನಿವಾರ ಸಂಜೆ ನುಗ್ಗಿರುವ ಕಳ್ಳರ ಎರಡು ಬಾಗಿಲು ಒಡೆದು ನುಗ್ಗಿದ್ದಾರೆ. ಅಷ್ಟರಲ್ಲಿ ಸಂತೋಷ್‌ ಅವರ ಹೆಂಡತಿ ತಮ ಮೊಬೈಲ್‌ ಸಿಸಿ ಕ್ಯಾಮರಾದಲ್ಲಿ ಕಳ್ಳರು ಒಳ ನುಗ್ಗಿರುವ ಬಗ್ಗೆ ಗಮನಿಸಿ ಕೂಡಲೇ ಸಂತೋಷ್‌ ಮತ್ತು ಮಗ ಸುಹಾಸ್‌‍ಗೆ ತಿಳಿಸಿದಾಗ ಕೂಡಲೇ ಅವರು ಮನೆಯ ಹತ್ತಿರ ಬಂದು ಮನೆಯೊಳಗಿದ್ದ ಕಳ್ಳರನ್ನು ನೋಡಿ ಕೂಗಿದಾಗ ಮನೆಯ ಹಿಂಭಾಗದ ಕಾಂಪೌಂಡ್‌ ಹಾರಿ, ಕಳ್ಳರು ಓಡಿ ಹೋಗಿದ್ದಾರೆ.
ಕಳ್ಳತನ ಮಾಡಲು ಇಟಿಎಸ್‌‍ ಕಾರಿನಲ್ಲಿ ಬಂದಿದ್ದು ಮನೆಯ ಹಿಂಭಾಗದ ಡೋರ್‌ ಬ್ರೇಕ್‌ ಮಾಡಿ ಕಳ್ಳತನ ಮಾಡಲು ಒಳಗೆ ನುಗ್ಗಿದ್ದು, ಅದರಲ್ಲಿ ಒಬ್ಬನು ಪಿಸ್ತೂಲ್‌ ತೋರಿಸಿ ಕಾರು ಹತ್ತಿ ಪರಾರಿಯಾಗಿದ್ದಾನೆ. ಮತ್ತೊಬ್ಬನನ್ನು ಮನೆಯವರು ಮತ್ತು ಸಾರ್ವಜನಿಕರ ಸಹಾಯದಿಂದ ಹಿಡಿಯಲಾಗಿದೆ. ಸಾರ್ವಜನಿಕರು ಆತನಿಗೆ ಗೂಸಾ ನೀಡಿದ್ದಾರೆ. ಕಳ್ಳತನ ಪ್ರಯತ್ನ ಪ್ರಕರಣದಲ್ಲಿ ಸಿಕ್ಕಿ ಬಿದ್ದವನನ್ನು ಶಕೀರ್‌ ಅಹಮದ್‌ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *