ಸಕಲೇಶಪುರ: ಸಾರ್ವಜನಿಕರೊಂದಿಗೆ ಯಾಕೆ ಕೂಗಾಡುತ್ತಿರ ನಿಧಾನ ಮಾತನಾಡಿ ಎಂದು ಶಾಸಕರು ಸೂಚಿಸಿದರೆ, ನಾನೇಲ್ಲಿ ಕೂಗಾಡುತಿದ್ದೆನೆ ನೀವೇ ಕೂಗಾಡುತ್ತಿರುವುದು ಎಂದು ತಹಸೀಲ್ದಾರ್ ಸುಪ್ರೀಯ ಹೇಳಿದ್ದರಿಂದ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದ ಘಟನೆಗೆ ಪಟ್ಟಣದ ಮಿನಿ ವಿಧಾನಸೌಧ ಸಾಕ್ಷಿಯಾಯಿತು.

ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾರಾಯಣ ಗುರು ಹಾಗೂ ವಿಶ್ವಕರ್ಮ ಜಯಂತಿ ಪೂರ್ವಸಭೆಗೆ ಆಗಮಿಸಿದ ಶಾಸಕರನ್ನ ಕಂಡ ಸಾರ್ವಜನಿಕರು ಸಭೆ ಆಯೋಜನೆಯಾಗಿದ್ದ ಸಭಾಂಗಣ ಪ್ರವೇಶಿಸಿದರು. ಇದರಿಂದ ಸಿಡಿಮಿಡಿಗೊಂಡ ತಹಸೀಲ್ದಾರ್ ಏರುದ್ವನಿಯಲ್ಲಿ ಕೊಠಡಿಯಿಂದ ಹೊರಗಿರುವಂತೆ ಸಾರ್ವಜನಿಕರಿಗೆ ಸೂಚಿಸಿದರು. ತಹಸೀಲ್ದಾರ್ ವರ್ತನೆಯಿಂದ ಕಸಿವಿಸಿಗೊಂಡ ಶಾಸಕ ಏಕ್ರೀ ಸಾರ್ವಜನಿರಕರೊಂದಿಗೆ ಕೂಗಾಡುತ್ತಿರ ಮೆದುವಾಗಿ ಮಾತನಾಡಿ, ನಾವೀರುವುದೆ ಸಾರ್ವಜನಿಕರ ಕೆಲಸ ಮಾಡಲು, ಅವರು ಕಟ್ಟುವ ತೆರಿಗೆಯಿಂದ ನಾವು ನೀವು ಸಂಭಳ ತೆಗೆದುಕೊಳ್ಳುತ್ತಿರುವುದು ಎಂದು ತಹಸೀಲ್ದಾರ್‌ಗೆ ಸೂಚಿಸಿದರು. ಇದರಿಂದ ಕೋಪಗೊಂಡ ತಹಸೀಲ್ದಾರ್ ನಾನಲ್ಲ ಕೂಗಾಡುತ್ತಿರುವುದು ನೀವು ಎಂದು ಏರುದ್ವನಿಯಲ್ಲಿ ಶಾಸಕರಿಗೆ ಹೇಳಿದ್ದರಿಂದ ಕೆಲಕಾಲ ಸಭೆ ಸ್ತಬ್ದಗೊಂಡಿತ್ತು. ಮಾತು ಮುಂದುವರಿಸಿದ ತಹಸೀಲ್ದಾರ್ ಸಭೆ ನಡೆಸುವುದಾ ಅಥವಾ ಸಾರ್ವಜನಿಕ ಕೆಲಸ ಮಾಡುವುದಾ ಎಂದರು.

ಮೊದಲು ಸಾರ್ವಜನಿಕರ ಕೆಲಸ ಮಾಡಿ ನಂತರ ಸಭೆ ನಡೆಸೋಣ ಎಂದು ಶಾಸಕರು ಹೇಳಿದ್ದರಿಂದ ಮತ್ತಷ್ಟು ಕೋಪಗೊಂಡ ತಹಸೀಲ್ದಾರ್ ಸಾರ್ವಜನಿಕರು ನೀಡಿದ ಕಡತವನ್ನು ಪಡೆದು ಸಭೆಯಿಂದ ತಮ್ಮ ಕೊಠಡಿಗೆ ತೆರಳಿದರು ಸಭೆಗೆ ತಹಸೀಲ್ದಾರ್ ಆಗಮಿಸುವ ನಿರೀಕ್ಷೆಯಲ್ಲಿ ಕೆಲಕಾಲ ಕಾದರು ವಾಪಸ್ಸಾಗದ ಹಿನ್ನಲೆಯಲ್ಲಿ ಸಹಾಯಕ ತಹಸೀಲ್ದಾರ್ ಮೋಹನ್ ಕುಮಾರ್ ಉಪಸ್ಥತಿಯಲ್ಲಿ ಸಭೆ ಆರಂಭಿಸಲಾಯಿತು. ಆದರೆ, ಸಭೆ ಮುಕ್ತಾಯಗೊಂಡರು ಸಹ ತಹಸೀಲ್ದಾರ್ ಸಭೆಗೆ ಆಗಮಿಸಲಿಲ್ಲ. ಈ ವೇಳೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದ ದೂರುಗಳ ಸುರಿಮಳೆ ಸುರಿಸಿದ ಸಾರ್ವಜನಿಕರು ತಿಂಗಳಾನುಗಟ್ಟಲೆ ಅಲೆದರು ಕಚೇರಿಯಲ್ಲಿ ಕೆಲಸವಾಗುವುದಿಲ್ಲ, ದೂರದೂರದ ಊರಿನಿಂದ ಬರುವ ನಮಗೆ ಕೆಲಸವಾಗದಿದ್ದರೆ ಸಾವಿರಾರು ರೂ. ಖರ್ಚಚಾಗುತ್ತಿದೆ ಎಂದು ದೂರುಗಳ ಸುರಿಮಳೆಗೈದರು.

ಕೆಲಸಕ್ಕಾಗಿ ಬಂದರೆ ಬರಬೇಡಿ ಎಂದು ತಹಸೀಲ್ದಾರ್ ಹೇಳುತ್ತಾರೆ ಎಂದು ಯಸಳೂರು ಹೋಬಳಿ ಸುಂಡಹಳ್ಳಿ ನಿವಾಸಿ ಮೋಹನ್ ಎಂಬುವವರು ದೂರಿದರೆ, ಕಳೆದ ಎರಡುವರೆ ವರ್ಷದಿಂದ ಕಚೇರಿ ಕೆಲಸಕ್ಕಾಗಿ ಆಗಮಿಸುತ್ತಿದ್ದೆವೆ. ಆದರೆ, ಯಾವುದೆ ಕೆಲಸವಾಗಿಲ್ಲ. ಮದ್ಯವರ್ತಿಗಳ ನೆರವಿನಲ್ಲಿ ಬಂದರೆ ಮಾತ್ರ ಕಚೇರಿಯಲ್ಲಿ ಕೆಲಸವಾಗುತ್ತದೆ ಎಂದು ಯಡಕೇರಿ ಗ್ರಾಮದ ಪುಟ್ಟಸ್ವಾಮಿ,ಪುನೀತ್ ಎಂಬುವವರು ದೂರಿದರೆ, ಮಣಜೂರು ಗ್ರಾಮದ ಗೀರಿಶ್ ಎಂಬುವವರು ಕಳೆದ ಒಂದು ವರ್ಷದಿಂದ ನೂರಾರು ಬಾರಿ ೯೪ ಸಿಸಿ ಹಕ್ಕುಪತ್ರಕ್ಕಾಗಿ ಕಚೇರಿಗೆ ಬರುತ್ತಿದ್ದೆವೆ ಇಲ್ಲಿಗೆ ಬಂದ ಎಲ್ಲ ತಹಸೀಲ್ದಾರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಹೊಸದಾಗಿ ಬಂದ ತಹಸೀಲ್ದಾರ್ ಮತ್ತೆ ಸ್ಥಳಪರಿಶೀಲನೆ ನಡೆಸ ಬೇಕು ಎನ್ನುತ್ತಾರೆ. ನಮಗೆ ಕಚೇರಿಗೆ ಅಲೆದು ಅಲೆದು ಸುಸ್ತಾಗಿದೆ ಸೋಮವಾರದ ಒಳಗಾಗಿ ಹಕ್ಕುಪತ್ರ ನೀಡದಿದ್ದರೆ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತೆವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *