ಹಾಸನ: ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಹಾಯಕ ಕಾರ್ಯದರ್ಶಿ ಹಾಗೂ ಅಥ್ಲೆಟಿಕ್ಸ್ ತರಬೇತಿದಾರ ಎಸ್.ಎಲ್. ಪ್ರಸನ್ನಕುಮಾರ್ ಅವರು ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.
ಜಗತ್ತಿನಲ್ಲಿ ಒಲಂಪಿಕ್ ನಂತರ ಅತಿ ದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲ್ಪಡುವ ಈ ಸ್ಪರ್ಧೆ ಸೆ. 25 ರಿಂದ ಅ. 5ರ ವರೆಗೆ ನಡೆಯಲಿದೆ.
ಪ್ಯಾರಾ ಕಮಿಟಿ ಆಫ್ ಇಂಡಿಯಾ ಆಯೋಜಿಸುತ್ತಿರುವ ಈ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ 110ಕ್ಕೂ ಹೆಚ್ಚು ದೇಶಗಳ 1700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಸನ್ನಕುಮಾರ್ ಅವರು ಹಾಸನದಿಂದ ಆಯ್ಕೆಯಾದ ಏಕೈಕ ತೀರ್ಪುಗಾರರಾಗಿದ್ದಾರೆ. ಅವರ ಸಾಧನೆಯಿಂದ ಹಾಸನ ಜಿಲ್ಲೆಗೆ ಹೆಮ್ಮೆ ತಂದಿದೆ.
ಮುಂದಿನ ದಿನಗಳಲ್ಲಿ ಪ್ರಸನ್ನಕುಮಾರ್ ಅವರು ಒಲಂಪಿಕ್ಸ್‌ನಲ್ಲೂ ತೀರ್ಪುಗಾರರಾಗಿ ಆಯ್ಕೆಯಾಗಲೆಂದು ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾರೈಸಿದೆ.
