ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಮೊದಲ ದಿನವೇ ಕಾಂಗ್ರೆಸ್ ಕಾರ್ಯಕರ್ತರು ದಾಂಗುಡಿ ಇಟ್ಟು ಕಾಂಗ್ರೆಸ್ ಜಾತ್ರೆಯಾಗಿ ಪರಿವರ್ತಿಸಿದ್ದಾರೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ತಕ್ಷಣ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು. ಅವರು ಅಧಿಕಾರಿಯಾಗಿ ಕೆಲಸ ಮಾಡಲು ಯೋಗ್ಯರಲ್ಲ. ಸ್ಥಳೀಯರಿಗೆ ಅವಕಾಶ ಕೊಡದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ಮಾರುತಿ ಅವರನ್ನು ಮಾರಾಟ ಮಾಡಲೆಂದು ಇಟ್ಟುಕೊಂಡಿದ್ದಾರೆ. ದುಡ್ಡು ಮಾಡುವುದು, ವಸೂಲಿ ಮಾಡಿಕೊಡುವುದೇ ಅಧಿಕಾರಿಗಳ ಕೆಲಸವಾಗಿದೆ. ನಮ್ಮೂರ ದೆವರನ್ನು ನೋಡಲು ನಮಗೆ ಸ್ವಾತಂತ್ರ್ಯವಿಲ್ಲ ಎಂದು ಆರೋಪಿಸಿದರು.
ಕ್ಷೇತ್ರ ಶಾಸಕರನ್ನು ಬಿಟ್ಟು ಜಾತ್ರೆ ಮಾಡುತ್ತಿದ್ದಾರೆ. ಈ ಭಾಗ್ಯಕ್ಕೆ ಅವರನ್ನು ಎಂಎಲ್ ಎ ಮಾಡಬೇಕು. ಸ್ಥಳೀಯರಿಗೆ ಪ್ರತ್ಯೇಕವಾಗಿ ದರ್ಶನಕ್ಕೆ ಅವಕಾಶ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರನ್ನು ಕರೆದುಕೊಂಡು ದೇವಸ್ಥಾನಕ್ಕೆ ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಎಪಿ ಜಿಲ್ಲಾ ಉಪಾಧ್ಯಕ್ಷ ಆನಂದ್, ತೇಜೂರು, ಮಂಜುನಾಥ್, ಪಂಕಜ ಹೇಳಿದರು.
