ಹಾಸನ: ಚನ್ನರಾಯಪಟ್ಟಣದ ವಿದ್ಯಾ ನಗರದಲ್ಲಿ ಸಾರ್ವಜನಿಕರಿಗೆ ತೀವ್ರ ಉಪಟಳ ನೀಡಿದ್ದ ಕಾಡುಕೋಣ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದಾಗಲೇ ಮೃತಪಟ್ಟಿದೆ.
ನಿನ್ನೆ ಏಕಾಏಕಿ ಪಟ್ಟಣಕ್ಕೆ ನುಗ್ಗಿದ್ದ ಕಾಡುಕೋಣ 54 ವರ್ಷದ ಶಾಂತಮ್ಮ ಎಂಬುವರ ಮೇಲೆ ದಾಳಿ ನಡೆಸಿತ್ತು ಮಾತ್ರವಲ್ಲದೆ ಕಾರು, 3 ಬೈಕ್ ಜಖಂಗೊಳಿಸಿತ್ತು.

ಕಾಡುಕೋಣ ಸೆರೆಗೆ ಕಠಿಣ ಕ್ರಮ ಕೈಗೊಂಡಿದ್ದ ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸಿತ್ತು. ಕಾಡು ಕೋಣವಿರುವ ಜಾಗಕ್ಕೆ ಸಾರ್ವಜನಿಕರು ಹೋಗದಂತೆ 200 ಮೀಟರ್ ದೂರದಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿತ್ತು. ಮೈಸೂರಿನಿಂದ ಬಂದಿದ್ದ ಅರವಳಿಕೆ ತಜ್ಞರು ಅರವಳಿಕೆ ಚುಚ್ಚು ಮದ್ದು ನೀಡಿ ಕಾಡು ಕೋಣವನ್ನು ಲಾರಿಗೆ ಹತ್ತಿಸಿದ್ದರು. ಆದರೆ ಇಂಜಿಕ್ಷನ್ ರಿವರ್ಸ್ ನಿಂದ ಪ್ರಾಣಿ ಮೃತಪಟ್ಟಿದೆ ಎನ್ನಲಾಗಿದೆ.
