ಹಾಸನ: ಶಕ್ತಿ ದೇವತೆ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಕರ್ತವ್ಯ ಲೋಪ ಆರೋಪದಡಿ ಅಮಾನತು ಮಾಡಲಾಗಿದ್ದ ಕಂದಾಯ ಇಲಾಖೆಯ ನಾಲ್ವರು ನೌಕರರ ಅಮಾನತು ಆದೇಶವನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಾಪಸ್ ಪಡೆದಿದ್ದಾರೆ.
ರಾಜಸ್ವ ನಿರೀಕ್ಷಕಾರದ ಎಂ.ಎಸ್. ಗೋವಿಂದರಾಜು (ಕೆ.ಹೊಸಕೋಟೆ), ಯೋಗಾನಂದ (ಹೊಳೆನರಸೀಪುರ), ಸಂತೋಷ್ ಅಂಬಿಗರ್ (ಗ್ರಾಮ ಆಡಳಿತಾಧಿಕಾರಿ), ಶಿರಾಜ್ ಕುಮಾರ್ (ಗ್ರಾಮ ಆಡಳಿತ ಅಧಿಕಾರಿ) ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.
ಗೋಲ್ಡನ್ ಪಾಸ್ ಗಳ ಸ್ಕ್ಯಾನ್ ಮಾಡುವಾಗ ಈ ನೌಕರರು ಕರ್ತವ್ಯ ಲೋಪ ಎಸಗಿದ್ದರು. ಈ ಸಂಬಂಧ ಉಪವಿಭಾಗಾಧಿಕಾರಿ ಲಿಖಿತ ವರದಿ ನೀಡಿ ಅಧಿಕ ಕಾರ್ಯದೊತ್ತಡದಿಂದ ಲೋಪವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಕಾರ್ಡ್ ಗಳ ಸ್ಕ್ಯಾನ್ ಗಿಂತ ಅಧಿಕ ಭಕ್ತರು ಸರದಿ ಸಾಲಿನಲ್ಲಿ ಬಿಟ್ಟಿದ್ದರೆಂಬ ಗುರುತರ ಆರೋಪ ಇವರ ಮೇಲಿತ್ತು.
