ಹಾಸನ: ಮೈಸೂರು ನೈರುತ್ಯ ರೈಲ್ವೆ ವಿಭಾಗದ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರ ಮಹತ್ವದ ತಾಣಗಳ ಪಟ್ಟಿಗೆ ಸೇರಿಸಿದೆ.
ಮೈಸೂರು, ಸಾಗರ ಹಾಗು ಬಾಗೇಶಪುರ ನಿಲ್ದಾಣಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. 1960ರಲ್ಲಿ ಆರಂಭವಾದ ಈ ನಿಲ್ದಾಣ ಹಲವು ವಿಶೇಷತೆಗಳನ್ನು ಹೊಂದಿದೆ. ಕಾಲದ ತಿರುವುಗಳನ್ನು ಸಾಕ್ಷಿಯಾಗಿ ಹುದುಗಿಸಿಟ್ಟುಕೊಂಡಿರುವ ಈ ನಿಲ್ದಾಣ ತನ್ನ ಅಪರೂಪದ ವಾಸ್ತುಶಿಲ್ಪ, ಸಂಸ್ಕೃತಿ ಸ್ಪರ್ಶ ಹಾಗು ಇತಿಹಾಸದ ಮಹತ್ವ ದಿಂದ ವಿಶಿಷ್ಟ ಸ್ಥಾನ ಕಾಯ್ದುಕೊಂಡಿದೆ. ರೈಲು ಮಾರ್ಗದ ಅಭಿವೃದ್ಧಿಯ ಜೊತೆಗೆ ಗ್ರಾಮೀಣ ಬದುಕಿನ ರೂಪಾಂತರಕ್ಕೆ ಸಹ ಕಾರಣವಾದ ಈ ನಿಲ್ದಾಣ ಹಳೆಯ ನೆನಪು ಮತ್ತು ಹೊಸ ಪ್ರಯಾಣಗಳ ಸೇತುವೆಯಾಗಿ ಇಂದಿಗೂ ಹೆಮ್ಮೆಯಿಂದ ನಿಂತಿದೆ.
1960 ನಿರ್ಮಿಸಲಾದ ಬಾಗೇಶಪುರ ರೈಲು ನಿಲ್ದಾಣವು ವಸಾಹತುಶಾಹಿ ವಾಸ್ತುಶಿಲ್ಪ ಹಾಗು ಜನಪದ ವಾಸ್ತು ಶೈಲಿಗಳ ವಿಶಿಷ್ಟ ಸಂಯೋಜನೆಯನ್ನು ಪ್ರತಿಬಿಂಬಿಸು ತ್ತದೆ. ಹಳೆಯ ಮೈಸೂರು ಪ್ರದೇಶದ ಅನೇಕ ಪಾರಂಪರಿಕ ರೈಲು ನಿಲ್ದಾಣ ಗಳಿಗೆ ಸೇರಿರುವ ಸಂಯುಕ್ತ ವಾಸ್ತು ವಿನ್ಯಾಸವನ್ನು ಈ ಕಟ್ಟಡ ಹೊಂದಿದೆ.
ಪ್ರತಿಯೊಂದು ಗೇಬಲ್‌ನಲ್ಲಿ ವೃತ್ತಾಕಾರದ ಗಾಜಿನ ಕಿಟಕಿಯಿಂದ ಅಲಂಕರಿಸ ಲಾಗಿದೆ. ಸಣ್ಣ ವರಾಂಡಾ ಮತ್ತು ಕಟ್ಟಡದ ಸುತ್ತಲಿನ ಕಡಪ ಕಲ್ಲಿನ ನೆಲಹಾಸು ಜನಪದ ವಾಸ್ತುಶೈಲಿಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ಈ ನಿಲ್ದಾಣದಲ್ಲಿ ನಿತ್ಯ ಆರು ರೈಲುಗಳು ನಿಲುಗಡೆ ಹೊಂದಿವೆ.
1918ರಲ್ಲಿ ರೈಲು ಪ್ರಯಾಣ ಆರಂಭ:
ಭಾರತದಲ್ಲಿ 1853ರಲ್ಲಿ ರೈಲು ಸಂಚಾರ ಪ್ರಾರಂಭವಾಯಿತಾದರೂ ಹಾಸನ ಜಿಲ್ಲೆಯಲ್ಲಿ 1917 ರಿಂದ ರೈಲು ಓಡಾಟ ಪ್ರಾರಂಭವಾಯಿತು. ಅದೇ ರೀತಿ ಬಾಗೇಶಪುರ ಮಾರ್ಗ ದಲ್ಲಿ 19178ರ ಜನವರಿ 3 ರಂದು ಅರಸೀಕೆರೆ, ಬಾಗೇಶಪುರ, ಹಾಸನ ಮಾರ್ಗವಾಗಿ ಮೈಸೂರಿಗೆ ಮೊದಲ ರೈಲು ಓಡಾಟ ಶುರು ವಾಯಿತು. ಅಂದರೆ ರೈಲು ಸಂಚಾರ ಪ್ರಾರಂಭವಾದ 42 ವರ್ಷಗಳ ಬಳಿಕ ನಿಲ್ದಾಣ ತಲೆ ಎತ್ತಿತು. ಇದು ರೈಲು ಪರಂಪರೆಯ ಪ್ರಮುಖ ಸಂಪರ್ಕಗಳಲ್ಲಿ ಒಂದಾಗಿದೆ. ಮೈಸೂರು ವಿಭಾಗವು ತನ್ನ ರೈಲು ಆಸ್ತಿಗಳ ಐತಿಹಾಸಿಕ ಹಾಗು ಸಾಂಸ್ಕೃತಿಕ ಮಹತ್ವವನ್ನು ಕಾಪಾಡುತ್ತಾ ಸಮುದಾಯದೊಂದಿಗೆ ಉತ್ತಮ ಸಂವಹನವನ್ನು ಮುಂದು ವರಿಸುತ್ತಿದೆ. ನಿಲ್ದಾಣದ ಸುತ್ತಲೂ ಹೇರಳ ಪ್ರಮಾಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ಬೆಳೆದಿದ್ದು, ಸುಂದರ ಉದ್ಯಾನವನದ ಅನು ಭವವನ್ನು ನೀಡುತ್ತದೆ.
ಅರ್ಥಪೂರ್ಣ ಸ್ಟೇಷನ್ ಮಹೋತ್ಸವ
ಬಾಗೇಶಪುರ ರೈಲು ನಿಲ್ದಾಣಕ್ಕೆ 65 ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಶುಕ್ರವಾರ ಸ್ಟೇಷನ್ ಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಖಾಧಿಕಾರಿ, ಡಿಆರ್‌ಯುಸಿಸಿ ಸದಸ್ಯರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರೈಲ್ವೆ ಸಿಬ್ಬಂದಿ ಮತ್ತು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ನಿವೃತ್ತ ರೈಲ್ವೆ ನೌಕರ ಗೋವಿಂದ ಗೌಡ ಮತ್ತು ದೂರದರ್ಶಕ ಪ್ರದರ್ಶನಕ್ಕಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ ಬಿ.ಎಲ್.ಗಗನ್ ಅವರನ್ನು ಗೌರವಿಸಲಾಯಿತು. ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.
