ಹಾಸನ: ಮಹಾನಗರ ಪಾಲಿಕೆಯಿಂದ ಬಾಕಿ ಕಂದಾಯ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳಲಾಗಿದ್ದು ನಗರದ ಪೆಟ್ರೋಲ್ ಬಂಕ್ ಕಚೇರಿಗೆ ಬೀಗ ಜಡಿಯಾಗಲಿದೆ.
ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ನೇತೃತ್ವದಲ್ಲಿ ನಗರದ ಸಾಲಗಾಮೆ ರಸ್ತೆಯಲ್ಲಿರುವ ಶ್ರೇಯಸ್ ಪೆಟ್ರೋಲ್ ಬಂಕ್‌ಗೆ ಬೀಗ ಹಾಕಲಾಯಿತು. ಕಳೆದ ಐದು ವರ್ಷಗಳಿಂದ ಕಂದಾಯ ಕಟ್ಟಿಲ್ಲ. ಸುಮಾರು 35 ಲಕ್ಷ ರೂ. ಪಾವತಿಸಬೇಕಿದೆ. ಈ ಸಂಬಂಧ ಹಲವು ಬಾರಿ ನೋಟೀಸ್ ನೀಡಿದ್ದರೂ ಪ್ರತಿಕ್ರಿಯಿಸಿರಲಿಲ್ಲ. ಮೊದಲು ವಾಣಿಜ್ಯ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಮನೆ ಕಂದಾಯ ಕಟ್ಟದಿದ್ದರೆ ನೀರು ಹಾಗು ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಾಗುತ್ತದೆಂದು ಕೃಷ್ಣಮೂರ್ತಿ ಹೇಳಿದರು.
