ಹಾಸನ: ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐಗಳನ್ನು ವರ್ಗಾವಣೆ ಮಾಡಲಾಗಿದೆ.
ಶಾಂತಿಗ್ರಾಮ ಠಾಣೆಯ ಅರುಣ್ ಅವರನ್ನು ಗಂಡಸಿ, ದುದ್ದ ಠಾಣೆಯ ಎಂ.ಟಿ.ಅಂತಿಮ ಅವರನ್ನು ಶಾಂತಿಗ್ರಾಮ, ಸೆನ್ ಠಾಣೆಯ ಜಿ.ಜತೇಂದ್ರಕುಮಾರ್-ದುದ್ದ, ಹಿರೀಸಾವೆ ಠಾಣೆಯ ರೂಪಾದೇವಿ ಬಿರಾದಾರ್-ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ, ಚ.ರಾ.ಪಟ್ಟಣ ಗ್ರಾಮಾಂತರ ಠಾಣೆಯ ಎಲ್.ಸಂತೋಷ್ ಅವರು ನುಗ್ಗೇಹಳ್ಳಿ, ಗೊರೂರು ಠಾಣೆಯಲ್ಲಿದ್ದ ಆರ್.ಧನರಾಜು-ಶ್ರವಣಬೆಳಗಳ ಠಾಣೆಗೆ ವರ್ಗಾಯಿಸಲಾಗಿದೆ.
ಕುಶಾಲನಗರ ಠಾಣೆಯ ಗಣೇಶ ಅವರಿಗೆ ಗೊರೂರು, ಶ್ರವಣಬೆಳಗೊಳ ಠಾಣೆಯ ಎನ್.ಜಿ.ನವೀನಕುಮಾರ್ ಅವರನ್ನು ಹಿರೀಸಾವೆ ಠಾಣೆಗೆ ವರ್ಗ ಮಾಡಲಾಗಿದೆ. ಪಿಎಸ್‌ಐಗಳಾದ ಟಿ.ಆರತಿ ಹಾಗು ಭರತಕುಮಾರ್ ರೆಡ್ಡಿ ಅವರಿಗೆ ಮುಂದಿನ ಆದೇಶದ ವರೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಸೋಮವಾರ ಆದೇಶಿಸಿದ್ದಾರೆ.
