ಚನ್ನರಾಯಪಟ್ಟಣ: ಯುವಕನೊಬ್ಬ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ತಾಲ್ಲೂಕಿನ ಹಿರೀಸಾವೆ ಸಮೀಪ ನಡೆದಿದೆ.

ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಅಜಿತ್ (25) ಮೃತ ಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಕಿರೀಸಾವೆ ಗಡಿ ಸಮೀಪ ಈ ಘಟನೆ ನಡೆದಿದೆ. ದಿ.ರಮೇಶ್, ಜಯಲಕ್ಷಮ್ಮ ನವರ ಒಬ್ಬನೇ ಪುತ್ರ. ತಂದೆ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ತಾಯಿ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದಾರೆ. ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *