ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ೩ ನಿರ್ದೇಶಕರನ್ನು ಅಮಾನತು ಮಾಡಿ ಸಮಿತಿ ಅಧ್ಯಕ್ಷ ಆರ್.ಟಿ.‌ದ್ಯಾವೇಗೌಡ ಆದೇಶಿಸಿದ್ದಾರೆ.

ನಿರ್ದೇಶಕರಾದ ಡಾ. ಅರವಿಂದ್, ಎಸ್.ಜಿ. ಶ್ರೀಧರ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ ಸಂಸ್ಥೆಯ ನಿರ್ದೇಶಕರುಗಳು ಯಾರೂ ಸಂಸ್ಥೆಗೆ ಸೇರಿದ ಕಟ್ಟಡದ ಬಾಡಿಗೆದರರು ಹಾಗೂ ಫಲಾನುಭವಿಗಳಾಗಿರಬಾದೆಂಬ ಸ್ಪಷ್ಟ ನಿಯಮವಿದೆ. ಈ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಸಂಘದ ಸದಸ್ಯರು ದೂರು ನೀಡಿದ ಹಿನ್ನಲೆ ಪರಿಶೀಲನೆ ನಡೆಸಿದ ವೇಳೆ ನಗರದ ಸಿ.ಟಿ.ಬಸ್ ನಿಲ್ದಾಣದ ಮುಂಭಾಗವಿರುವ ಸಂಸ್ಥೆಗೆ ಸೇರಿದ ವಿದ್ಯಾ ಭವನ ಕಟ್ಟಡದಲ್ಲಿ ನಿರ್ದೇಶಕರಾದ ಡಾ.ಅರವಿಂದ್ ಅವರು ಕೊಠಡಿಯನ್ನು ಬಾಡಿಗೆ ಪಡದು ಅದನ್ನು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆ ನೀಡಿರುವುದು ಸಾಭೀತಾಗಿದೆ. ಅಂತೆಯೇ ಇದೇ ಕಟ್ಟಡದಲ್ಲಿ ಜಿ.ಆರ್.ಶ್ರೀನಿವಾಸ್ ಅವರು ಜಿಆರ್‌ಆರ್ ಎಂಬ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಸಂಸ್ಥೆಗೆ ಕಟ್ಟಬೇಕಾದ ೧ ಕೋಟಿಗೂ ಹೆಚ್ಚು ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿರುತ್ತಾರೆ. ಹಾಗೂ ಎಸ್.ಜಿ.ಶ್ರೀಧರ್ ಅವರು ಇದೇ ಕಟ್ಟಡದಲ್ಲಿ ಬಾಡಿಗೆದಾರರಾದ ಎಸ್.ವಿ.ಗುಂಡುರಾವ್ ಅಂಡ್ ಕೋ ಸಂಸ್ಥೆಯ ಪಾಲುದಾರರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಂಘದ ಸದಸ್ಯರ ದೂರನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಯ ನಿಯಮಗಳು ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಮುಂದಿನ ಆದೇಶದ ವರೆಗೂ ಈ ಮೂವರನ್ನು ಅಮಾನತ್ತು ಮಾಡಲಾಗಿದ್ದು, ಈ ಅಮಾನತ್ತಿನ ಅವಧಿಯಲ್ಲಿ ಸೋಮವಾರ ನಡೆಯುವ ಕಾರ್ಯಕಾರಿ ಸಮಿತಿ ಸಭೆ ಸೇರಿದಂತೆ ಸಂಸ್ಥೆಯ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *