ಹಾಸನ: 50 ವರ್ಷಗಳಿಂದ ಅವರು ಮಾಡಿದ ಅವ್ಯವಹಾರ ಬಯಲಿಗೆ ಬರುತ್ತದೆಂದು ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಎಂಟಿಇಎಸ್ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಸಂಸ್ಥೆಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 40 ಕೋಟಿ ರೂ. ಅನುದಾನವನ್ನು ಅಶೋಕ್ ಹಾರನಹಳ್ಳಿ ಅವಧಿಯಲ್ಲಿ ದುರುಪಯೋಗ ಮಾಡಿಕೊಳ್ಳಲಾಗಿದೆ. ನಾವು ಅಧಿಕಾರ ವಹಿಸಿಕೊಂಡ ಮೇಲೆ ಕಡತಗಳನ್ನು ಪರಿಶೀಲಿಸಿ ಲೋಕಾಯುಕ್ತ, ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದೇವೆ. ಆದರೆ ಅದನ್ನು ಸಹಿಸದೆ ನಿರ್ದೇಶಕರನ್ನು ಎತ್ತಿ ಕಟ್ಟಿ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು.
