ನರೇಗಲ್ಲ ಆ.೨೪: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದೆ. ಜಾತ್ರಾ ಮಹೋತ್ಸವದ ಮಂಡಳಿಯವರು ಇನ್ನೂ ಹೆಚ್ಚೆಚ್ಚು ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಬೇಕು. ಇದರಿಂದಾಗಿ ಬಡವರ ಕಲ್ಯಾಣಕ್ಕೆ ಶ್ರಮಿಸಿದಂತಾಗುತ್ತದೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸ್ಥಳೀಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಜರುಗಿದ ೨ ಜೋಡಿ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಮೂಹಿಕ ಮದುವೆ ಎಂದರೆ ಬಡವರ ಮದುವೆಯಲ್ಲ, ಭಾಗ್ಯವಂತರ ಮದುವೆ. ಶ್ರೀ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯ ಶ್ಲಾಘನೀಯ

ಸ್ವಾರ್ಥಪರ ಚಿಂತನೆಗಳನ್ನು ಕೈ ಬಿಟ್ಟು, ಪರೋಪಕಾರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ನಾವು, ನಮ್ಮ ಕುಟುಂಬ ಅಷ್ಟೆ ಚನ್ನಾಗಿದ್ದರೆ ಸಾಲದು ನಮ್ಮ ಸುತ್ತಲಿನವರು ಸಂತೋಷವಾಗಿ ಇರಬೇಕು. ಅಂದಾಗ ಮಾತ್ರ ನಾವು ಸಂತೋಷದಿಂದ ಇರಲು ಸಾಧ್ಯ. ಪರಸ್ಪರ ದ್ವೇಷ, ಅಸೂಯೆಗಳನ್ನು ಮಾಡದೆ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅವುಗಳನ್ನು ಮಕ್ಕಳಿಗೂ ಬಾಲ್ಯದಿಂದಲೆ ಕಲಿಸುವ ಕಾರ್ಯವಾಗಬೇಕು ಎಂದರು.

ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಸರ್ವಧರ್ಮ ಸಾಮೂಹಿಕ ವಿವಾಹ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಏಕತೆ ಮತ್ತು ಸಾಮರಸ್ಯದಿಂದ ಬಾಳುವಲ್ಲಿ ಸಾಮೂಹಿಕ ವಿವಾಹ ಸಹಕಾರಿಯಾಗಲಿವೆ ಎಂದರು.

ಈವೇಳೆ ನವ ವಧುವರರಿಗೆ ಶ್ರೀಗಳು ಆಶೀರ್ವದಿಸಿದರು. ಶರಣಪ್ಪ ಜುಟ್ಲ, ಬಸಪ್ಪ ಲಕ್ಕನಗೌಡ್ರ, ಮಲ್ಲಿಕಾರ್ಜುನ ಜುಟ್ಲ, ಬಾಳಪ್ಪ ಕಳಕಣ್ಣವರ, ಶರಣಪ್ಪ ಗಂಗರಗೊಂಡ, ಶೇಖಪ್ಪ ಲಕ್ಕನಗೌಡ್ರ, ಆನಂದ ಕಳಕಣ್ಣವರ, ಸುನೀಲ ಅಂಬೇಕರ, ಪ್ರಕಾಶ ಪಿಡಗೊಂಡ, ಜಗದೀಶ ಹೊನವಾಡ, ಶರಣಯ್ಯ ಸಂಶಿಮಠ, ಶೇಖರಗೌಡ ಪಾಟೀಲ, ಶಶಿಧರ ಓದುಸುಮಠ, ನಿಂಗನಗೌಡ ಲಕ್ಕನಗೌಡ್ರ, ವೀರೇಶ ಪಿಡಗೊಂಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಜಾತ್ರಾ ಮಂಡಳಿ ಸದಸ್ಯರಿದ್ದರು.

ಆ.೨೪-ಎನ್‌ಆರ್‌ಜಿಎಲ್೨- ನರೇಗಲ್ಲನ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಜರುಗಿದ ೨ ಜೋಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವ ವಧುವರರಿಗೆ ಶ್ರೀಗಳವರು ಆಶೀರ್ವದಿಸಿದರು.

By admin

Leave a Reply

Your email address will not be published. Required fields are marked *