ಅರಕಲಗೂಡು: ಬೆಳ್ಳಂ ಬೆಳಿಗ್ಗೆ ರೈತರ ಜಮೀನಿಗೆ ಲಗ್ಗೆಯಿಟ್ಟಿರುವ ಗಜಪಡೆ ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ತಾಲ್ಲೂಕಿನ ಹೊಸನಗರ ಗ್ರಾಮದಲ್ಲಿ ನಡೆದಿದೆ.
ಮರಿಗಳು ಸೇರಿ ಹತ್ತಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಮೆಕ್ಕೆ ಜೋಳ, ಶುಂಠಿ ತಿಂದು, ತುಳಿದು ನಾಶಪಡಿಸಿವೆ. ಹೊಸನಗರ ಗ್ರಾಮ ಸಮೀಪದ ರೈತರ ಜಮೀನುಗಳಲ್ಲಿ ಗಜಪಡೆ ದಾಂಧಲೆ ನಡೆಸಿದ್ದು ಕಾಡಾನೆಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಫಸಲಿಗೆ ಬಂದಿದ್ದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿ ಹೋಗಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೊಸನಗರ ಸಮೀಪವೇ ಗಜಪಡೆ ಓಡಾಡುತ್ತಿದ್ದು ಅಕ್ಕಪಕ್ಕದ ಗ್ರಾಮಗಳಿಗೆ ಕಾಡಾನೆಗಳ ಚಲನವಲನದ ಮಾಹಿತಿ ನೀಡುತ್ತಿದ್ದು ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ.
