ಹಾಸನ: ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಅಶೋಕ್ ಹಾರನಹಳ್ಳಿ ಅವರ ಬಣ ಮೇಲುಗೈ ಸಾಧಿಸಿದೆ. ನೂತನ ಅಧ್ಯಕ್ಷರಾಗಿ ಬಿ.ಆರ್.ಗುರುದೇವ್, ಕಾರ್ಯದರ್ಶಿಯಾಗಿ ಜಿ.ಟಿ.ಕುಮಾರ್, ಖಜಾಂಚಿಯಾಗಿ ಎಸ್.ಜಿ.ಶ್ರೀಧರ್ ಅವರ ಆಯ್ಕೆಯನ್ನು ಅಧಿಕೃತಗೊಳಿಸಿ ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಆರ್.ಟಿ.ದ್ಯಾವೇಗೌಡ ಅವರ ಬಣಕ್ಕೆ ಹಿನ್ನಡೆಯುಂಟಾಗಿದೆ.