ಹಾಸನ: ಬೆಂಗಳೂರು-ಮಂಗಳೂರು ನಡುವಿನ ಅತ್ಯಂತ ಜನಪ್ರಿಯ ಹಗಲು ರೈಲು ಸಂಚಾರ, ಪಶ್ಚಿಮ ಘಟ್ಟಗಳ ಮಂಜು ಹೊದ್ದ ಬೆಟ್ಟಗುಡ್ಡಗಳ ದೃಶ್ಯಗಳನ್ನು ಆನಂದಿಸುವ ಪ್ರಯಾಣಿಕರಿಗೆ, ಕರಾವಳಿ ಸಂಪರ್ಕಕ್ಕೆ ಸುಲಭ ಮಾರ್ಗವಾಗಿದ್ದ ಈ ಸೇವೆಯ ಪುನಾರಂಭ ಇನ್ನೂ ಮುಂದೂಡಿಕೆಯಾಗುವ ಸಾಧ್ಯತೆ ಕಾಣಿಸುತ್ತಿದೆ.
ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್)ಯ ಪ್ರಕಟಣೆಯ ಪ್ರಕಾರ, ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ಮಾರ್ಗದಲ್ಲಿ ನಡೆಯುತ್ತಿರುವ ರೈಲ್ವೆ ವಿದ್ಯುದೀಕರಣ (ಆರ್‌ಇ) ಕಾಮಗಾರಿಯಲ್ಲಿ ಉಂಟಾಗಿರುವ ವಿಳಂಬದಿಂದಾಗಿ ನವೆಂಬರ್ 1, 2025ರಂದು ಈ ರೈಲುಗಳ ಪುನರಾರಂಭವಾಗುವ ಸಾಧ್ಯತೆ ಕಡಿಮೆಯಾಗಿದೆ.
ಈ ಸುದ್ದಿ ಪ್ರಯಾಣಿಕರಲ್ಲಿ ನಿರಾಸೆ ಹುಟ್ಟಿಸಿದ್ದು, ಮಳೆಗಾಲದಲ್ಲಿ ರಸ್ತೆಯ ಸಂಚಾರದ ತೊಂದರೆಗಳ ನಡುವೆ ರೈಲು ಸೇವೆಯ ಅಗತ್ಯತೆ ಹೆಚ್ಚಾಗಿರುವುದು ಇದಕ್ಕೆ ಕಾರಣ.