ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ರಾಗಿ ಬಿ.ಆರ್. ಗುರುದೇವ್ ಆಯ್ಕೆಯಾಗಿದ್ದರೂ ಅವರಿಗೆ ಕುರ್ಚಿ ಅಲಂಕರಿಸುವ ಭಾಗ್ಯ ಇನ್ನೂ ಸಿಕ್ಕಿಲ್ಲ.
ಸಹಕಾರ ಸಂಘಗಳ ಉಪನಿಬಂಧಕರ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ಅಶೋಕ್ ಹಾರನಹಳ್ಳಿ ಬಣದ ನಿರ್ದೇಶಕರು ಸಂಭ್ರಮಿಸಿದ್ದರು. ಆದರೆ ಆರ್.ಟಿ. ದ್ಯಾವೇಗೌಡ ಹಾಗೂ ಬೆಂಬಲಿಗರು ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿದ್ದಾರೆ. ಇಂದು ಪೊಲೀಸರ ನೇತೃತ್ವದಲ್ಲಿ ಬೀಗ ತೆಗೆಸುವುದಾಗಿ ಗುರುದೇವ್ ಹೇಳಿದ್ದರು. ಕಚೇರಿ ಮುಂಭಾಗ ಪೊಲೀಸ್ ಪೊಲೀಸ್ ಸರ್ಪಗಾವಲು ಹಾಕಲಾಗಿದೆಯಾದರೂ ಕಚೇರಿಗೆ ಬೀಗ ಹಾಕಲಾಗಿದೆ. ಈ ವಿವಾದಕ್ಕೆ ತಾರ್ಕಿಕ ಅಂತ್ಯ ಯಾವಾಗ ಎಂಬುದನ್ನು ಕಾದು ನೋಡಬೇಕಿದೆ.
