ಹಾಸನ: ಇಲ್ಲಿನ ಹೇಮಾವತಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ 20 ಅಡಿ ಎತ್ತರದ ಮಹಾರಾಜ್ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ವಿಚಾರವಾಗಿ ಶಾಸಕ ಹೆಚ್.ಪಿ. ಸ್ವರೂಪ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಸಂಜೆ ನಗರದ ಪ್ರಮುಖ ವೃತ್ತಗಳಲ್ಲಿ ಸಾಗುತ್ತಿದ್ದ ಮೆರವಣಿಗೆಯ ವೇಳೆ ಮಹಾವೀರ್ ವೃತ್ತದಲ್ಲಿ ಡಿಜೆ ಸೌಂಡ್‌ನ್ನು ಡಿವೈಎಸ್‌ಪಿ ಮುರುಳಿಧರ್ ಹಾಗೂ ಸಿಪಿಐ ಮೋಹನ್‌ಕೃಷ್ಣ ತಾತ್ಕಾಲಿಕವಾಗಿ ಆಫ್ ಮಾಡಿಸಿದರು. ಇದರಿಂದ ಯುವಕ-ಯುವತಿಯರು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ಎಚ್.ಪಿ. ಸ್ವರೂಪ್, ಎಲ್ಲರಿಗೂ ಒಂದೇ ನಿಯಮ ಇರಬೇಕು. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನಿಯಮ ಬೇಡ ಎಂದು ಪೊಲೀಸರ ಕ್ರಮದ ವಿರುದ್ಧ ಕಿಡಿಕಾರಿದರು. ತಕ್ಷಣ ಡಿಜೆ ಸೌಂಡ್ ಪುನಃ ಆನ್ ಮಾಡುವಂತೆ ಸೂಚನೆ ನೀಡಿದರು.
ಪೊಲೀಸರೊಂದಿಗೆ ಶಾಸಕರ ವಾಗ್ವಾದವೂ ನಡೆಯಿತು. ಶಾಸಕರ ಒತ್ತಾಯಕ್ಕೆ ತೊಡಗಿ ಪೊಲೀಸರು ಮತ್ತೆ ಡಿಜೆ ಆನ್ ಮಾಡಿದರು. ನಂತರ ಭಕ್ತರು ಉತ್ಸಾಹಭರಿತವಾಗಿ ಕುಣಿದು ಸಂಭ್ರಮಿಸಿದರು.
