filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 41;

ಹಾಸನ: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ ಅವರು ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಮಕ್ಕಳ ಕಲಿಕೆಗೆ ಆದ್ಯತೆ ನೀಡಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ‌ ಉಪನಿರ್ದೇಶಕ ಕೆ.ಎನ್. ಬಲರಾಮ್ ಸಲಹೆ ನೀಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ವಚನ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಬಳಗ, ರವಿ ನಾಕಲಗೂಡು ಆತ್ಮೀಯರ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಚೈತ್ರಾ ನಾಯಕರಹಳ್ಳಿ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚೈತ್ರಾ ಅವರ ತಂದೆ ಶಿಕ್ಷಕ ವೃತ್ತಿಯಿಂದ ಬಂದವರು. ಚೈತ್ರ ಅವರಿಗೆ ಹುದ್ದೆ ನಿಭಾಯಿಸುವ ಸಾಮರ್ಥ್ಯ ಇದೆ. ಶೈಕ್ಷಣಿಕವಾಗಿ ಮಕ್ಕಳಿಗೆ ಉತ್ತಮ ಬೋಧನೆ ಮಾಡುತ್ತಾರೆ.‌ ಸದಾ ಮಕ್ಕಳಿಗೆ ಸ್ಪಂದಿಸುತ್ತಾರೆ. ಅವರು ಶಿಕ್ಷಕರು-ಕಚೇರಿ ನಡುವೆ ಸೌಹಾರ್ದತೆಯಿಂದ ಇರುತ್ತಾರೆ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಲಿ. ಶಿಕ್ಷಕರ ಸಮಸ್ಯೆಗೆ ಪ್ರಾಮುಖ್ಯತೆ ಕೊಟ್ಟಂತೆ ಮಕ್ಕಳ ಕಲಿಕೆಗೂ ಕೆಲಸ ಮಾಡಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ.‌ ಅವರು ರಾಜ್ಯ ಮಟ್ಟದ ಪದಾಧಿಕಾರಿ ಆಗಲಿ ಎಂದು ಶುಭ ಹಾರೈಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಹೆಚ್.ಬಿ. ಮದನಗೌಡ ಮಾತನಾಡಿ, ಶಿಕ್ಷಕರಾಗಿ ವಚನ ಸಾಹಿತ್ಯ ಪರಿಷತ್ ಅನ್ನು ಬೆಳೆಸಿದ್ದು ಚೈತ್ರ‌ ಮಂಜೇಗೌಡರ ಸಾಧನೆಯಾಗಿದೆ. ಈ ಹುದ್ದೆಯಲ್ಲಿ ಅವರು ಉತ್ತುಂಗಕ್ಕೆ ಏರಲಿ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲಿ. ಅವರ ಬದುಕು ಉಜ್ವಲವಾಗಲಿ ಎಂದರು‌.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಜಿಲ್ಲೆಯ ಯಾವ ಶಿಕ್ಷಕಿಯರು ಸಂಘದ ಅಧ್ಯಕ್ಷರಾಗಿಲ್ಲ. ಚೈತ್ರ ಅವರಿಗೆ ಅವಕಾಶ ಒದಗಿ ಬಂದಿದೆ. ಸಂಘಟನಾತ್ಮಕವಾಗಿ ಶಿಕ್ಷಕರ ದು:ಖ ದುಮ್ಮಾನಗಳಿಗೆ ಕಿವಿಯಾಗಿದ್ದಾರೆ. ಶಿಕ್ಷಕರ ಸಂಘದ ಎಲ್ಲ ಸದಸ್ಯರ ಪ್ರೀತಿಯಿಂದ ಹುದ್ದೆ ಅಲಂಕರಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಮಾತನಾಡಿ, ಈ ಹುದ್ದೆ ಪಡೆಯಲು ಸಾಕಷ್ಟು ಹೋರಾಟವನ್ನು ಚೈತ್ರಾ ನಡೆಸಿದ್ದಾರೆ. ಸ್ವಲ್ಪ ಎಡುರು ತೊಡರುಗಳು ಎದುರಾದವು. ಅದನ್ನು ಹಿಮ್ಮೆಟ್ಟಿಸುವ ಧೈರ್ಯವನ್ನು ಅವರು ತೋರಿದ್ದಾರೆ ಎಂದರು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಜೆ.ಆರ್. ಕೆಂಚೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬಸವರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ‌. ಕೃಷ್ಣೇಗೌಡ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಅಬ್ದುಲ್ ಬಷೀರ್, ವಿ.ಎಸ್. ರಾಣಿ, ಜಯಲಕ್ಷ್ಮಿ ರಾಜಣ್ಣ, ಅಣ್ಣಪ್ಪ, ರಾಜೇಂದ್ರ, ದ್ಯಾವೇಗೌಡ, ಡಾ. ದಿನೇಶ್, ಕಟ್ಟಾಯ ಶಿವಕುಮಾರ್ ಮತ್ತಿತರರಿದ್ದರು.
ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *