ಹಾಸನ: ನಗರದ ಮಹಾರಾಜ ಪಾರ್ಕ್‌ನಲ್ಲಿ ಕಾಲೇಜು ಸ್ನೇಹಿತೆಯರೊಂದಿಗೆ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಲ್ಲೇನಹಳ್ಳಿಯಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ ಕೆ. ಪವನ್ (21) ಮೃತ ದುರ್ದೈವಿ. ಬುಧವಾರ ಹಾಸನಕ್ಕೆ ಬಂದಿದ್ದ ಪವನ್ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಪಾರ್ಕ್‌ನ ಆಸನದ ಮೇಲೆ ಕುಳಿತಿದ್ದ. ಮೂವರು ಹುಡುಗಾಟ ಮಾಡುತ್ತಾ ಕುಳಿತಿದ್ದ ದೃಶ್ಯವನ್ನು ದೂರದಿಂದ ಮಹಿಳೆಯೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಕರ್ಮಕಾಂಡ ಮಾಡಿಕೊಂಡು ಕುಳಿತಿದ್ದಾರೆ. ಸಣ್ಣ ಮಕ್ಕಳು ಓಡಾಡುವ ಜಾಗದಲ್ಲಿ ಹೇಗಿರಬೇಕೆಂಬ ಪರಿಜ್ಞಾನ ಇಲ್ಲವೇ. ಇಂತವರಿಗೆ ಏನು ಮಾಡಬೇಕು. ನಮ ಸಮಾಜ ಯಾವ ಸ್ಥಿತಿ ತಲುಪಿದೆ ನೋಡಿ. ಇಂತವರಿಗೆ ಏನು ಮಾಡಬೇಕೆಂದು ಮಹಿಳೆ ರೀಲ್‌್ಸ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋ ಪವನ್‌ನ ಸ್ನೇಹಿತರಿಗೂ ಸಿಕ್ಕಿತ್ತು. ಅದರಿಂದ ಮನನೊಂದ ಆತ ಎಲ್ಲರಿಗೂ ಕರೆ ಮಾಡಿ ಡಿಲೀಟ್ ಮಾಡುವಂತೆ ಗೋಗರೆದಿದ್ದ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಮನನೊಂದು ತಮ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಬಡ ಕುಟುಂಬದ ಪವನ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದಾನೆ. ತಾಯಿ ಮನೆಗೆಲಸ ಮಾಡಿಕೊಂಡು ಆತನನ್ನು ಬೆಳೆಸಿದ್ದರೆನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
