ಹಾಸನ: ಅರಕಲಗೂಡು ದಸರಾ ಮಹೋತ್ಸವಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾ ಭಾಸ್ತಿ ಅವರಿಗೆ ಶಾಸಕ ಎ.ಮಂಜು ಆಹ್ವಾನಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯ ನೂತನ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ದೀಪಾ ಭಾಸ್ತಿ ಅವರನ್ನು ಸ್ವತಃ ಭೇಟಿಯಾಗಿ ಆಹ್ವಾನಿಸಿದರು.
ಬಾನು ಮುಷ್ತಾಕ್ ಅವರ ಸಣ್ಣಕಥಾ ಸಂಕಲನ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಅನ್ನು ಆಂಗ್ಲಕ್ಕೆ ಅನುವಾದಿಸಿದ್ದ ದೀಪಾ ಭಾಸ್ತಿ, ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗಳಿಸಿ ದೇಶ-ವಿದೇಶಗಳಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ. ಕನ್ನಡದಿಂದ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಅನುವಾದಕಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ಮೈಸೂರು ದಸರಾ ಉದ್ಘಾಟನೆ ನೆರವೇರಿಸಿದ್ದ ಸಾಹಿತಿ ಬಾನು ಮುಷ್ತಾಕ್ ಅವರ ನಂತರ, ಇದೀಗ ಅರಕಲಗೂಡು ದಸರಾ ಪ್ರಮುಖ ದಿನದ ಕಾರ್ಯಕ್ರಮಕ್ಕೆ ದೀಪಾ ಭಾಸ್ತಿ ಅವರಿಗೆ ಆಹ್ವಾನ ನೀಡಿರುವುದು ವಿಶೇಷವಾಗಿಸಿದೆ.
