ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಆಗುತ್ತಿಲ್ಲ. ಬಂದ ಅನುದಾನ ಖರ್ಚು ಮಾಡಿದ್ರೆ ಸಾಕು ಅನ್ನೋ ಮನಸ್ಥಿತಿ ಮೂಡಿದೆ. ನಾಲ್ಕು ಫೋಟೋ ತೆಗೆಸಿ ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳುವುದೇ ಅಭಿವೃದ್ಧಿಯಲ್ಲ. ಕೆಡಿಪಿ ಸಭೆ ಅಂದರೆ ಜನರಿಗೆ ಗೊತ್ತಿಲ್ಲದಂತಾಗಿದೆ. ನಾನು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ಕೊಡಿ, ಸುತ್ತಿ ಬಳಸಿ ಹಾರಿಕೆ ಉತ್ತರ ಕೊಡುವುದು ಬೇಡ. ನನಗೆ ಗಿರಕಿ ಹೊಡೆಸಲು ಹೋದರೆ ನನಗೂ ಒಳ್ಳೆಯದಲ್ಲ, ನಿಮಗೂ ಒಳ್ಳೆಯದಲ್ಲ ಎಂದು ಅಧಿಕಾರಿಗಳಿಗೆ ಸಚಿವರು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಕೆ. ಸುರೇಶ್, ಡಿಸಿ ಕೆ.ಎಸ್. ಲತಾ ಕುಮಾರಿ, ಎಸ್ಪಿ ಮಹಮದ್ ಸುಜೀತಾ, ಸಿಇಓ ಪೂರ್ಣಿಮಾ ಹಾಗೂ ಇತರ ಅಧಿಕಾರಿಗಳು ಭಾಗಿಯಾಗಿದ್ದಾರೆ.
