ಹಾಸನ: ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ ನಮ್ಮ ನಂತರವೂ ಕನ್ನಡ ಉಳಿದುಕೊಳ್ಳುತ್ತದೆ ಎಂದು ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಹೇಳಿದರು.
ಅರಕಲಗೂಡು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿರುವುದು ನಮ್ಮ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆಯ ವಿಷಯ ವೈಯುಕ್ತಿಕವಾಗಿಯೂ ಹೆಮ್ಮೆಯ ವಿಷಯ. ಇದು ಮೊದಲ ಬಾರಿಗೆ ಮೂಲ ಕನ್ನಡ ಕೃತಿಗೆ ಬಂದಿರುವ ಪ್ರಶಸ್ತಿ. ಭಾರತದ ಮೊದಲ ಅನುವಾದಕಿಗೆ ಅಂದರೆ ನನಗೆ ಬಂದಿರುವ ಪ್ರಶಸ್ತಿ. ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಮೈಸೂರು ದಸರಾ ಉದ್ಘಾಟನೆ ದೀಪಾ ಭಾಸ್ತಿ ಕಡಗಣನೆ ಮಾಡಿದ್ದಾರೆ ಎಂಬ ಬಿಜೆಪಿ-ಶಾಸಕರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ ರಾಜಕೀಯ ಹೇಳಿಕೆಗಳಿಗೆ ನಾನು ಕಮೆಂಟ್ ಮಾಡಲ್ಲ. ರಾಜ್ಯ ಸರ್ಕಾರ ನಿರ್ಧಾರ ತಗೊಂಡಿದ್ದಾರೆ ಅದರ ಬಗ್ಗೆ ನೋ ಕಮೆಂಟ್ಸ್ ಎಂದರು.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ವಿರೋಧ ವಿಚಾರವಾಗಿ ಬೇರೊಂದು ವೈಯಕಕ ದೃಷ್ಟಿಯಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಯಾವತ್ತು ಇಲ್ಲ. ಅಂತಹ ವಿಷಯಕ್ಕೆ ನಾನು ಬರಲ್ಲ. ನಾನು ಸಾಹಿತ್ಯದಲ್ಲಿ ಮಾಡಿರುವಂತಹ ಕೆಲಸಗಳು, ಸಾಹಿತ್ಯದಲ್ಲಿ ಮಾಡಬೇಕಿರುವ ಕೆಲಸಗಳು ಕೆಲಸ ನನಗೆ ಮುಖ್ಯ ಎಂದರು.
ನಮ್ಮಿಂದ ಕನ್ನಡ ಅಲ್ಲ, ನಾವಿರುವುದು ಕನ್ನಡಕ್ಕೋಸ್ಕರ. ನಾನು ಕೆಲಸ ಮಾಡುವುದು ಕನ್ನಡಕ್ಕೋಸ್ಕರ. ನನಗೆ ಅದರ ಮೇಲೆ ಜಾಸ್ತಿ ಗಮನ ಸೆಳೆಯಲು ನನ್ನ ಶ್ರಮ, ಶಕ್ತಿ ಅದಕ್ಕೆ ಮೀಸಲಿಡುತ್ತೇನೆ. ವೈಯುಕ್ತಿಕ ಟೀಕೆಗಳ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ.
ಸಾಹಿತ್ಯ ದೃಷ್ಟಿಯಲ್ಲಿ ಮೊದಲಬಾರಿಗೆ ಕನ್ನಡ ಭಾಷೆಗೆ ಬೂಕರ್ ಪ್ರಶಸ್ತಿ ಬಂದಿದೆ.
ಮೊದಲು ಹಿಂದಿಯ ಗೀತಾಂಜಲಿ ಶ್ರೀ ಅವರಿಗೆ ಬಂದಿತ್ತು, ಅದನ್ನು ಅನುವಾದ ಮಾಡಿದವರು ಅಮೆರಿಕಾದ ಡೇಸಿ ರಾಕ್ ಎನ್ನುವವರು. ಇದು ಎರಡನೇ ಸಲ ಇಂಡಿಯಾ ಸಾಹಿತ್ಯ ಕೃತಿಗೆ ಬೂಕರ್ ಪ್ರಶಸ್ತಿ ಬರುತ್ತಿದೆ. ನಮ್ಮಲ್ಲಿ ಕನ್ನಡ ಮಾತ್ರವಲ್ಲ ಭಾರತದ ಭಾಷೆಗಳ ಒಳ್ಳೆಯ ಕೃತಿಗಳು ಸಾವಿರಾರು ಇವೆ.
ಅದರ ಮಧ್ಯೆ ಸುಮ್ಮನೆ ಬೇರೆ ಚರ್ಚೆಗೆ ಹೋಗದೆ ಸಾಹಿತ್ಯವನ್ನು ಮುಂದಿಟ್ಟುಕೊಂಡು ಅದರಲ್ಲಿ ಏನು ಮಾಡಬಹುದು ಎನ್ನುವುದು ನನಗೆ ಮುಖ್ಯ. ಇವತ್ತು ಮೊದಲಬಾರಿಗೆ ಅರಕಲಗೂಡು ದಸರಾಗೆ ಬರ್ತಿದ್ದೀನಿ. ನನಗೆ ವೈಯುಕ್ತಿಕವಾಗಿ ತುಂಬಾ ದೊಡ್ಡ ಹೆಮ್ಮೆ, ತುಂಬಾ ಖುಷಿ ಆಗಿದೆ ಎಂದರು.