ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದೆ. ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಮತ್ತು ಮೆಕ್ಕಿನಮನೆ ಗ್ರಾಮಗಳಲ್ಲಿ ಗಜಪಡೆಯ ದಾಳಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕಾಫಿ, ಅಡಿಕೆ, ಮೆಣಸು ಬೆಳೆಗಳನ್ನು ನೆಲಸಮಗೊಳಿಸಿದ ಪರಿಣಾಮ ರೈತರು ನಲುಗಿದ್ದಾರೆ. ದೊರೆಸ್ವಾಮಿ ಮತ್ತು ಗುರುಶಾಂತೆಗೌಡರಿಗೆ ಸೇರಿದ ತೋಟಗಳಲ್ಲಿ ಹತ್ತಾರು ವರ್ಷಗಳ ಶ್ರಮ ವ್ಯರ್ಥವಾಗಿದೆ.

ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇರುವುದಕ್ಕೆ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *