ಬೇಲೂರು: ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್ ಪಡವಳಲು ಅವರು ಆಯ್ಕೆಯಾಗಿದ್ದಾರೆ.
ರಾಘವೇಂದ್ರ ಹೊಳ್ಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಪಿ.ಡಿ.ಚಂದ್ರಶೇಖರ್ ಹಾಗೂ ಹರೀಶ್ ಸ್ಪರ್ಧಿಸಿದ್ದರು.
ಒಟ್ಟು 69 ಮತಗಳ ಪೈಕಿ 49 ಮತಗಳನ್ನು ಚಂದ್ರಶೇಖರ್ ಪಡವಳಲು ಪಡೆದು ಗೆಲುವಿನ ನಗೆ ಬೀರಿದರೆ ಪ್ರತಿಸ್ಪರ್ಧಿ ಹರೀಶ್ 20 ಮತ ಗಳಿಸಿ ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಹಿರಿಯ ಛಾಯಾಗ್ರಾಹಕ ಡಾ. ಶ್ರೀವತ್ಸ ಎಸ್. ವಟಿ ಕಾರ್ಯ ನಿರ್ವಹಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲಾ ಸಂಘದ ಸಹ ಕಾರ್ಯದರ್ಶಿ ಮಲ್ಲೇಶ್, ಮಾಜಿ ಅಧ್ಯಕ್ಷ ಎ.ಬಿ.ಪ್ರಕಾಶ್ ಇತರರಿದ್ದರು.