ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗಣ್ಯರಿಗೆ ವಿಶೇಷ ನಿಯಮ ಜಾರಿಯಾಗಿದೆ. ದೇವಾಲಯದತ್ತ ಹೋಗುವ ಮಾರ್ಗದಲ್ಲಿ ಯಾವುದೇ ಗಣ್ಯರಿಗೂ ತಮ್ಮದೇ ವಾಹನದಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲಾಡಳಿತದಿಂದಲೇ ಶಾಸಕರು, ಸಚಿವರು ಹಾಗೂ ಅವರ ಕುಟುಂಬ ಸದಸ್ಯರಿಗೆ ಶಿಷ್ಟಾಚಾರ ವಾಹನಗಳು ನಿಯೋಜನೆಗೊಂಡಿದ್ದು, ಅದರಲ್ಲಿ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಹಾಸನದ ಪ್ರವಾಸಿ ಮಂದಿರದಿಂದಲೇ ಜಿಲ್ಲಾಡಳಿತದ ಸಿಬ್ಬಂದಿ ಗಣ್ಯರನ್ನು ಕರೆತರುತ್ತಿದ್ದು, ದೇವಸ್ಥಾನದ ಶಿಸ್ತು ಹಾಗೂ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಐಬಿ ಬಳಿ ಬಂದು ಅಲ್ಲಿಂದ ಜಿಲ್ಲಾಡಳಿತದ ಶಿಷ್ಟಾಚಾರ ವಾಹನದಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸಿದ ಶಾಸಕ ಎ. ಮಂಜು, ಕುಟುಂಬ ಸಮೇತವಾಗಿ ಭಕ್ತಿ ಭಾವದಿಂದ ದರ್ಶನ ಪಡೆದರು.
ದೇವಾಲಯದ ಬಳಿ ಶಾಸಕರ ವಾಹನಕ್ಕೂ ನಿರ್ಬಂಧ ಹಿನ್ನಲೆಯಲ್ಲಿ ನಿಯೋಜಿತ ಶಿಷ್ಟಾಚಾರ ವಾಹನದಲ್ಲೇ ಆಗಮಿಸಿರುವುದು ಈ ಬಾರಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ನಿದರ್ಶನವಾಗಿದೆ.
