ಹಾಸನ: ಸುರಿಯುವ ಮಳೆಯ ಮಧ್ಯೆಯೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಜಾತ್ರೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಭಕ್ತರ ಸುರಕ್ಷತೆ, ವಾಹನ ನಿಲುಗಡೆ ವ್ಯವಸ್ಥೆ, ನೀರು ಮತ್ತು ವಿದ್ಯುತ್ ಸರಬರಾಜು, ತುರ್ತು ಆರೋಗ್ಯ ಸೇವೆ, ಸಂಚಾರ ನಿಯಂತ್ರಣ, ಮತ್ತು ದೇವಾಲಯ ಪ್ರದೇಶದ ಸ್ವಚ್ಛತೆ ಮುಂತಾದ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಸಚಿವರು ವಿವರವಾಗಿ ಮಾಹಿತಿ ಪಡೆದರು.
ಈ ವೇಳೆ ಸಚಿವರು ಅಧಿಕಾರಿಗಳಿಗೆ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು, ವ್ಯವಸ್ಥೆಗಳಲ್ಲಿ ಯಾವುದೇ ಬಿರುಕು ಬಾರಬಾರದು ಎಂದು ಸೂಚನೆ ನೀಡಿದರು. ಮಳೆಗಾಲದ ಅನಾನುಕೂಲತೆಗಳ ನಡುವೆಯೂ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ಅವರು ತಿಳಿಸಿದ್ದಾರೆ.
ಭಕ್ತರಿಗೆ ಸುಗಮ ದರ್ಶನ ಹಾಗೂ ಸೌಕರ್ಯಯುತ ವಾತಾವರಣ ಒದಗಿಸುವುದು ಸರ್ಕಾರದ ಪ್ರಾಮುಖ್ಯತೆಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಪೊಲೀಸ್ ವರಿಷ್ಟಾಧಿಕಾರಿ ಮೊಹಮ್ಮದ್ ಸುಜೀತಾ, ಎಸಿ ಮಾರುತಿ, ತಹಶೀಲ್ದಾರ್ ಗೀತಾ ಇತರರಿದ್ದರು.
