ಹಾಸನ: ಶಕ್ತಿ ದೇವತೆ ಹಾಸನಾಂಬೆ ದರ್ಶನದ ಹತ್ತನೇ ದಿನವಾದ ಭಾನುವಾರ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಇವತ್ತು ನಟ ಶಿವರಾಜ್ ಕುಮಾರ್ ಹಾಗೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 2 ರಂದು ವಿಶ್ವದಾದ್ಯಂತ ತೆರೆ ಕಂಡಿರುವ ಕಾಂತಾರ 1 ಚಲನಚಿತ್ರ ಭರ್ಜರಿ ಯಶಸ್ಸು ಕಂಡಿದೆ. ದೈವಾರಾಧನೆಯಲ್ಲಿ ನಂಬಿಕೆ ಇಟ್ಟಿರುವ ರಿಷಬ್ ಶೆಟ್ಟಿ ಮೊನ್ನೆಯಷ್ಟೇ ಮೈಸೂರಿನ ಚಾಮುಂಡೇಶ್ವರಿ ಹಾಗೂ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇಂದು ಬೆಳಿಗ್ಗೆ 10 ರಿಂದ 12ರ ನಡುವೆ ಜಿಲ್ಲಾಡಳಿತ ಶಿಷ್ಟಾಚಾರ ನಿಯಮದಂತೆ ಕುಟುಂಬ ಸಮೇತ ಬರಲಿದ್ದಾರೆ. ಅದೇ ರೀತಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಸಹ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡುವರು.
