ಹಾಸನ: ನಗರದ ಹಾಲುವಾಗಿಲು ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗಲೇ ಎಡವಿಬಿದ್ದು ಮೃತಪಟ್ಟಿದ್ದಾರೆ.
ಗುಡ್ಡೇಗೌಡನಕೊಪ್ಪಲು ನಿವಾಸಿ ಪ್ರಕಾಶ್ (50) ಮೃತರು. ಮದ್ಯವ್ಯಸನಿಯಾಗಿದ್ದ ಪ್ರಕಾಶ್ ಕುಡಿದ ಅಮಲಿನಲ್ಲಿ ಮನೆಗೆ ತೆರಳುತ್ತಿದ್ದರು. ಆಯತಪ್ಪಿ ಬಿದ್ದಿದ್ದರಿಂದ ಎದೆ ಭಾಗಕ್ಕೆ ಏಟಾಗಿದೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದೂ ಪ್ರಯೋಜನವಾಗಲಿಲ್ಲ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
