ಹಾಸನ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಾನಿ ಸಂಭವಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬುಧವಾರ ಸಂಜೆ ಶುರುವಾದ ಮಳೆ ರಾತ್ರಿ 1 ಗಂಟೆ ವರೆಗೆ ಎಡೆಬಿಡದೆ ಸುರಿಯಿತು.
ಮಳೆಯ ಹೊಡೆತಕ್ಕೆ ಹಾಸನ–ಮರ್ಕುಲಿ ಮಾರ್ಗದ ಕೌಶಿಕ ಕೆರೆ ಕೋಡಿ ಒಡೆದು ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗಿದೆ. ಸಾವಂತನಹಳ್ಳಿಯ ಶ್ರೀರಾಮದೇವರ ಕಟ್ಟೆ ಒಡೆದು ಹೊಲಗಳಿಗೆ ನೀರು ನುಗ್ಗಿರುವುದರಿಂದ ಸಮಸ್ಯೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್ ರೈತರಿಂದ ಮಾಹಿತಿ ಪಡೆದು ತಕ್ಷಣ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
