ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸದಿದ್ದರೆ ಜನರೇ ಜಿಲ್ಲಾಧಿಕಾರಿ ಅವರನ್ನ ಸರಿ ಮಾಡುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಾಸನಾಂಬೆ ಜಾತ್ರೆಯಲ್ಲಿ ಹಾಸನ ಎಡಿಆರ್ ಎಲ್ ಸಂಶುದ್ದಿನ್ ನನ್ನ ಜೊತೆ ನಡೆದುಕೊಂಡು ಬಂದರು ಎಂಬ ಕಾರಣಕ್ಕೆ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಿದ್ದಾರೆ. ಅಧಿಕಾರಿಗಳು ಎಂಎಲ್ ಎ ಜೊತೆ ಮಾತನಾಡಬಾರದಾ. ಪ್ರಾಮಾಣಿಕ ಅಧಿಕಾರಿ ಸಂಶುದ್ದಿನ್ ಮಾಡಿದ ತಪ್ಪಾದರು ಏನು. ಮುಸ್ಲಿಂರು ಓಟು ಹಾಕದಿದ್ದರೆ ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತಿರಲಿಲ್ಲ. ಆದರೆ ಅವರಿಗೂ ಭದ್ರತೆ ಇಲ್ಲದಾಗಿದೆ. ಮುಸ್ಲಿಂರಿಗೆ ಬಿಜೆಪಿ ಅವಧಿಯಲ್ಲೂ ನೆಮ್ಮದಿ ಇಲ್ಲ, ಕಾಂಗ್ರೆಸ್ ಅವಧಿಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಮಹಾನಗರ ಪಾಲಿಕೆ ಆಯುಕ್ತರನ್ನು ಕಡ್ಡಾಯ ರಜೆ ಮೇಲೆ ಕಳಿಸಲು ಕಾರಣ ಏನೆಂಬುದನ್ನು ಸಾರ್ವಜನಿಕವಾಗಿ ಹೇಳಬೇಕು. 15 ದಿನಗಳಿಂದ ಬಯೊಮೆಟ್ರಿಕ್ ಕೊಡೊಕೆ ಅಧಿಕಾರಿ ಇಲ್ಲದೆ ಸಮಸ್ಯೆ ಆಗ್ತಿದೆ. ಈ ಜಿಲ್ಲಾಧಿಕಾರಿಗೆ ಹೆದರಿ ಅಪರ ಜಿಲ್ಲಾಧಿಕಾರಿ ಹುದ್ದೆಗೆ ಯಾರೂ ಬರುತ್ತಿಲ್ಲ. ಮಂಜುನಾಥ್ ಒಬ್ಬರೇ 14 ಹುದ್ದೆ ನಿಬಾಯಿಸಬೇಕಾಗಿದೆ.
ಇವರಿಗೆ ಹೆದರಿ ಎಸಿ ಮಾರುತಿ ವರ್ಗ ಮಾಡಿಸಿಕೊಂಡು ಹೋದರು. ಅಬಕಾರಿ ಡಿಸಿ ಸಹ ಬಿಟ್ಟು ಹೋದರು.
ಜಿಲ್ಲಾಧಿಕಾರಿಗಳ ದುರಹಂಕಾರಿ ವರ್ತನೆ ಮೀತಿ ಮೀರಿದೆ. ಬೈಕ್, ಸೈಕಲ್ ನಲ್ಲಿ ತಿರುಗಾಡುವ ಬದಲು ಸರ್ಕಾರ ಕೊಟ್ಟಿರುವ ಕಾರಿನಲ್ಲಿ ಓಡಾಡಿ ಜನರ ಸಮಸ್ಯೆ ಬಗೆ ಹರಿಸಿ ಎಂದು ವಾಗ್ದಾಳಿ ನಡೆಸಿದರು.
