ಹಾಸನ: ನಗರದ ಇಶಾ ಚೈತನ್ಯ ಫೌಂಡೇಶನ್ ನಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಡಾ. ಕೆ.ಪಿ. ಪ್ರಮೋದ್ ಮತ್ತು ಹಾಸ್ಯ ನಟ ಮಂಡ್ಯ ಸಿದ್ದು ಮಾತನಾಡಿ, ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜದ ನಿರ್ಮಾಣದ ದಾರಿಯಲ್ಲಿ ಇಶಾ ಚೈತನ್ಯ ಫೌಂಡೇಶನ್ ಮಾಡುತ್ತಿರುವ ಸೇವೆ ಶ್ಲಾಘನೀಯ. ಕನ್ನಡ ಭಾಷೆ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಉಳಿವಿಗಾಗಿ ಯುವಕರು ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆಯ ಕಾನೂನು ಘಟಕದ ಅಧ್ಯಕ್ಷ ಬಿ.ಪಿ. ಸಂದೀಪ್ ಮಾತನಾಡಿ, ಕನ್ನಡ ಶಾಲೆಗಳು ಹಾಗೂ ಕನ್ನಡ ಭಾಷೆ ಉಳಿವಿನ ಬಗ್ಗೆ ಮತ್ತು ಕನ್ನಡ ಭಾಷೆ ಹುಟ್ಟಿ ಬೆಳೆದ ಬಂದ ಇತಿಹಾಸದ ಬಗ್ಗೆ ಇತಿಹಾಸದ ಬಗ್ಗೆ ತಿಳಿಸಿದರು.
ಇಶಾ ಚೈತನ್ಯ ಫೌಂಡೇಶನ್ ನ ಮುಖ್ಯಸ್ಥ ಚೇತನ್ ಶ್ಯಾಮರಾಜ್ ಮಾತನಾಡಿ, ನಮ್ಮ ಕೇಂದ್ರದಲ್ಲಿ ವ್ಯಸನ ಮುಕ್ತಿ ಮಾತ್ರವಲ್ಲ ಮಾನವೀಯತೆ ಸಂಸ್ಕೃತಿ ಮತ್ತು ಶಿಸ್ತು ಬೆಳೆಸುವ ಕಾರ್ಯಗಳನ್ನು ನಡೆಸುತ್ತಿದ್ದೇವೆ. ರಾಜ್ಯೋತ್ಸವದ ಸಂಭ್ರಮವನ್ನು ಈ ನೆಲೆಯಲ್ಲಿ ಆಚರಿಸುವುದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕರಾಟೆ ಹಾಗೂ ಪಂಜ ಕುಸ್ತಿಯಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ನಗರದ ಐಸಿರಿ ಜಿಮ್‌ ಮಾಲೀಕ ಗುರು ಹಾಗೂ ಮಮತ ದಂಪತಿ ಮಕ್ಕಳಾದ ಧ್ವನಿ ಎಸ್‌.ಜಿ ಹಾಗೂ ಹನಿ ಎಸ್.ಜಿ ಸಹೋದರಿಯರಿಗೆ ಹಾಗೂ ರೈಫಲ್‌ ಮತ್ತು ಪಿಸ್ತೂಲ್‌ ಕ್ರೀಡೆಯಲ್ಲಿ ರಾಜ್ಯ ಮ್ತತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಹಾಸನ ನಗರದ ಶರತ್‌ ಮತ್ತು ಚಿರಂತ್‌ ಅವರಿಗೆ ಸನ್ಮಾನ ಮಾಡಲಾಯಿತು.
ಇಶಾ ಚೈತನ್ಯ ಸಂಸ್ಥಾಪಕರಾದ ಚೇತನ್ ಶಾಮರಾಜ್ ಮತ್ತು ಅವರ ತಂದೆ ತಾಯಿಗಳಾದ ಶಾಮರಾಜ್, ಹೇಮರಾಜ್, ಡಾ.ಮುತ್ತುರಾಜ್ ಇತರರಿದ್ದರು.

Leave a Reply

Your email address will not be published. Required fields are marked *