ಹಾಸನ: ರಾಜ್ಯೋತ್ಸವ ಪಶಸ್ತಿ ಪುರಸ್ಕೃತರು, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಅವರ ಸಹೋದರಿ ಹೆಚ್.ಎಂ.ಮೋಹಿನಿ ಸಿದ್ದೇಗೌಡ ಅವರು ನಿಧನರಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಮುದ್ರೆಮನೆಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.
ಸಕಲೇಶಪುರ ತಾಲ್ಲೂಕಿನ ಹಂಜಗೋಡನಹಳ್ಳಿ ಗ್ರಾಮದವರಾದ ಮೋಹಿನಿ ಅವರು, ಬೇಲ್ಲೂರು ತಾಲ್ಲೂಕು ಬೆಣ್ಣೂರು ಗ್ರಾಮದ ಸಿದ್ದೇಗೌಡ ಅವರನ್ನು ವಿವಾಹವಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದರು. 2019-20ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದರು.
