ಸಕಲೇಶಪುರ: ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಮಿಕೊಂಡಿದ್ದ ಪ್ರಥಮ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಗ್ಗಿಬಾಯ್ಸ್ ಪ್ರಥಮ ಸ್ಥಾನ ಪಡೆದುಕೊಂಡಿತು. ಹಾನುಬಾಳು ದ್ವಿತೀಯ, ಬಾಳ್ಳುಪೇಟೆ ತೃತೀಯ ಹಾಗು ಸುಳ್ಳಕ್ಕಿ ತಂಡ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಸುಳ್ಳಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ರಾತ್ರಿ 10 ಗಂಟೆಗೆ ಆರಂಭಗೊಂಡ ಪಂದ್ಯವಳಿ ಸೋಮವಾರ ಬೆಳಿಗ್ಗೆ 7.30ರವರೆಗೂ ನಿರಂತರವಾಗಿ ನಡೆಯಿತು. ಇಡೀ ರಾತ್ರಿ ನೂರಾರು ಕ್ರೀಡಾ ಪ್ರೇಕ್ಷರು ಮೈಕೊರೆಯುವ ಚಳಿಯ ನಡುವೆಯೂ ಪಂದ್ಯಾವಳಿಗಳನ್ನು ವೀಕ್ಷಣೆ ಮಾಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಪಂದ್ಯಾವಳಿಯಲ್ಲಿ ಬೇಲೂರು, ಆಲೂರು, ಸಕಲೇಶಪುರ, ಮೂಡುಗೆರೆ ಸೇರಿಗೆ ಜಿಲ್ಲೆಯ ನಾನಾ ಭಾಗಗಳಿಂದ ಹಲವು ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಪೊಲೀಸ್ ಇಲಾಖೆಯ ಪೃಧ್ವಿ, ಕೀರ್ತಿ, ಭೀಮ್ ಆರ್ಮಿಯ ಜಗದೀಶ್, ಮಂಜು ಸುಳ್ಳಕ್ಕಿ ಮತ್ತಿತರರು ಬಹುಮಾನ ವಿತರಣೆ ಮಾಡಿದರು.
