ಹಾಸನ: ಡಾ: ಎ.ಸಿ.ಎಂ.ಚಾರಿಟಬಲ್ ಟ್ರಸ್ಟ್, ಆಶ್ರಯ ಸೆಂಟರ್ ಫಾರ್ ಟ್ರಾಸ್ಪಾರಮೆಷನ್, ಜಿಲ್ಲಾ ಕ್ರೀಡಾ ಪರಿಷತ್, ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಸಂಸ್ಥೆ, ಜಿಲ್ಲಾ ಅಮೆಚೂರ್ ಜೊಡೋ ಸಂಸ್ಥೆ ವತಿಯಿಂದ ಡಾ. ಎ.ಸಿ.ಮುನಿವೆಂಕಟೇಗೌಡ ಅವರ ಜನ್ಮದಿನದ ಅಂಗವಾಗಿ ಡಿ. 27, 28 ರಂದು ಪ್ರಥಮ ಬಾರಿಗೆ ಹಾಸನ ವಲಯ ಮಟ್ಟದ ಜೂಡೋ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ರೀಡಾ ಪರಿಷತ್ ಕಾರ್ಯದರ್ಶಿ ನಿರಂಜನರಾಜ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. 5ನೇ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಾಗೂ ಜಿಲ್ಲೆಯ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡೆಗಳಲ್ಲಿ (01-01-2024 ರಿಂದ 30-11-2025) ರವರೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಸನ್ಮಾನ ಸಮಾರಂಭವನ್ನು ಡಿ. 28ರಂದು ಇದೇ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಲಾಗುವುದು. ಭಾಗವಹಿಸುವ ತಂಡಗಳು, ಸನ್ಮಾನಕ್ಕೆ ಭಾಜನರಾಗುವ ಕ್ರೀಡಾಪಟುಗಳು ಡಿ. 20ರ ಒಳಗೆ ತಮ್ಮ ಹೆಸರನ್ನು ಕ್ರೀಡಾ ಪರಿಷತ್ ಕಾರ್ಯದರ್ಶಿ ಮೊ.ನಂ. 9900839475 ಇಲ್ಲಿಗೆ ಕರೆ ಮಾಡಿ ಹೆಸರು ನೋಂದಾಯಿಸಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕ್ರೀಡಾ ಪರಿಷತ್ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ, ಕಾರ್ಯಾಧ್ಯಕ್ಷ ಪಿ.ಬಿ. ಕೇಶವಮೂರ್ತಿ, ಶರತ್ ಚಂದ್ರ, ಮಹದೇವ, ಡಾ. ಮಾಧವ್ ಇದ್ದರು.
filter: 0; fileterIntensity: 0.0; filterMask: 0; hdrForward: 0; highlight: true; brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 36; 