ಹಾಸನ: ಅಪಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಹಾಗು 25 ಸಾವಿರ ರೂ. ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌್ಸ ನ್ಯಾಯಾಲಯ (ಪೋಕ್ಸೋ 1) ಮಂಗಳವಾರ ತೀರ್ಪು ಪ್ರಕಟಿಸಿದೆ.
ತಾಲ್ಲೂಕಿನ ಗೊರೂರು ಠಾಣಾ ವ್ಯಾಪ್ತಿಯ ಗ್ರಾಮವೊಂದರ ಚೇತನ್ (28) ಎಂಬಾತನ ವಿರುದ್ಧ 2022ರ ಅ. 12ರಂದು ದೂರು ದಾಖಲಾಗಿತ್ತು. ಐಪಿಸಿ ಕಲಂ 376(2)(ಎನ್), 376(3) ಹಾಗು 506ರ ಮತ್ತು ಪೊಕ್ಸೋ ಕಾಯ್ದೆಯ ಕಲಂ 4 ಹಾಗು 6ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಹೆಚ್.ಎಂ.ದೇವರಾಜು ಅವರು, ಸಾಕ್ಷ್ಯಾಧಾರಗಳ ಪರಿಗಣಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಶ್ರೀನಿವಾಸಗೌಡ ವಾದ ಮಂಡಿಸಿದ್ದರು.
ಗರ್ಭಿಣಿ ಮಾಡಿದ್ದ ಕಾಮುಕ:
ಚೇತನ್‌ನ ಹೆಂಡತಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪಕ್ಕದ ಮನೆಯ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಬಾಲಕಿ ಮರ್ಯಾದೆಗೆ ಹೆದರಿ ಪೋಷಕರಿಗೆ ವಿಷಯ ತಿಳಿಸದೆ ಮುಚ್ಚಿಟ್ಟಿದ್ದಳು. ಹಿಮ್ಸೌ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ ನೀಡಿದ್ದಳು. ಅವಧಿಪೂರ್ವ ಜನನವಾದ ಹಿನ್ನಲೆಯಲ್ಲಿ ಮಗು ಮೃತಪಟ್ಟಿತ್ತು ಎಂದು ತಿಳಿದುಬಂದಿದೆ.
