ಹಾಸನ: ನಗರದ ವಿದ್ಯಾ ನಗರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಅವರ ಮನೆಯ ಜಾಗ ಒತ್ತುವರಿ ತೆರವು ಮಾಡಿರುವ ಪ್ರಕರಣ ಸಂಬಂಧ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕೋರ್ಟ್ ಆದೇಶದಂತೆ ಇಂದು ಬೆಳಿಗ್ಗೆ ದೇವರಾಜು ಅವರು ಜೆಸಿಬಿ ಮೂಲಕ ಕಾಂಪೌಂಡ್ ತೆರವುಗೊಳಿಸಿ ಬೋರ್ಡ್ ಹಾಕಿದ್ದಾರೆ.
ಸ್ಥಳದಲ್ಲಿ ಹಾಕಲಾಗಿದ್ದ ಬೋರ್ಡ್ ತೆರವುಗೊಳಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದಿದೆ.
ಕೋರ್ಟ್ ಆದೇಶದಂತೆ ಸೈಟ್ ಸ್ವಾಧೀನ ಪಡೆದು ಬೋರ್ಡ್ ಹಾಕಲಾಗಿತ್ತು. ಆದರೆ ಯಶ್ ತಾಯಿ ಪರ ಬೆಂಬಲಿಗರು ಬೋರ್ಡ್ ತೆರವು ಮಾಡಲು ಮುಂದಾದರು ಎನ್ನಲಾಗಿದೆ. ಈ ವೇಳೆ ಬೋರ್ಡ್ ತೆರವುಗೊಳಿಸಲು ಬಂದವರಿಗೆ ಜಿಪಿಎ ಹೋಲ್ಡರ್ ದೇವರಾಜ್ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಕೋರ್ಟ್ ಆದೇಶದಂತೆ ಬೋರ್ಡ್ ಹಾಕಲಾಗಿದೆ. ಯಾಕಾಗಿ ಬೋರ್ಡ್ ತೆರವು ಮಾಡ್ತೀರಾ ಎಂದು ದೇವರಾಜ್ ಕಡೆಯವರು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಯಶ್ ತಾಯಿ ಪರ ಕೆಲವರು, ನಾವು ಈ ಜಾಗವನ್ನು ಖರೀದಿ ಮಾಡಿದ್ದೇವೆ. ಇಲ್ಲಿ ಕಾಂಪೌಂಡ್ ಯಾಕೆ ತೆರವು ಮಾಡಲಾಗಿದೆ ಎಂದು ವಾದ ಮುಂದಿಟ್ಟರು.
ಈ ಸಂದರ್ಭ ಜಿಪಿಎ ಹೋಲ್ಡರ್ ದೇವರಾಜ್ ಹಾಗೂ ಯಶ್ ತಾಯಿ ಕಡೆಯವರ ನಡುವೆ ತೀವ್ರ ವಾಗ್ವಾದ ನಡೆಯಿತು. ಅಲ್ಲದೆ, ಕೋರ್ಟ್ ಆದೇಶ ಎಲ್ಲಿದೆ ಎಂದು ಯಶ್ ತಾಯಿ ಕಡೆಯವರು ಅಸಮಾಧಾನ ವ್ಯಕ್ತಪಡಿಸಿದರು.
.
