ಚನ್ನರಾಯಪಟ್ಟಣ: ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬೇಕರಿ ಮೇಲ್ಚಾವಣಿಗೆ ವ್ಯಾಪಿಸಿ ಕೆಲವು ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಮುಂಜಾನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಹೊಸ ಬಸ್ ಸ್ಟಾಂಡ್ ಪಕ್ಕದ, ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಸ್ವೀಟ್ಸ್ ನಲ್ಲಿ ಇಂದು ಮುಂಜಾನೆ ಸುಮಾರು ಮೂರರಿಂದ ನಾಲ್ಕು ಗಂಟೆಯ ಸಮಯದಲ್ಲಿ ಘಟನೆ ಸಂಭವಿಸಿದೆ.
ಬೇಕರಿ ಗೌಡನ್ ನಲ್ಲಿ ಶೇಖರಣೆ ಮಾಡಿದ್ದ ಮರದ ಹೊಟ್ಟಿಗೆ ಬೆಂಕಿ ತಗುಲಿದ್ದರಿಂದ ಬೆಂಕಿಯ ಕೆನ್ನಾಲಿಗೆ ಕೆಲವು ವಸ್ತುಗಳು ಸುಟ್ಟುಹೋಗಿದೆ. ಬೆಂಕಿಯ ಅವಘಡದಿಂದ ಅಪಾರ ಹಾನಿ ಉಂಟಾಗುವುದರೊಳಗೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಬೇಕರಿ ಹಿಂಭಾಗದಲ್ಲಿ ಕೆಲ ಪುಂಡಪೋಕರಿಗಳು ರಾತ್ರಿ ವೇಳೆ ಮದ್ಯಪಾನ ಮತ್ತು ಧೂಮಪಾನ ಸೇವಿಸಿ, ಸಿಗರೇಟ್ ಕಿಡಿತಾಕಿರುವ ಹಿನ್ನೆಲೆಯಲ್ಲಿ, ಬೆಂಕಿ ಹತ್ತಿಕೊಂಡಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ತನಿಖೆ ಬಳಿಕ ಗೊತ್ತಾಗಲಿದೆ. ಘಟನೆಯಿಂದ 15 ರಿಂದ 20 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
ಚನ್ನರಾಯಪಟ್ಟಣ ಅಗ್ನಿಶಾಮಕ ದಳದ AFSTO ಪುಟ್ಟಸ್ವಾಮಿ, ಸಿಬ್ಬಂದಿಗಳಾದ ಕುಮಾರ್, ಶಿವಾನಂದ, ಭೀಮೇಶ್, ವಾಹನ ಚಾಲಕ ಗಂಗಾಧರ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
