ನವದೆಹಲಿ: ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆದು ಸ್ವಾವಲಂಬನೆ ಜೀವನ ನಡೆಸುತ್ತಿರುವ ಹಾಸನ ಮೂಲದ ಮಹಿಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ತಮ್ಮ 137 ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬೀದಿ ಬದಿ ಹೋಟೆಲ್ ನಡೆಸುತ್ತಿರುವ ಟಿ.ಎಸ್.ನಿಂಗಮ್ಮ ಅವರ ಸ್ಫೂರ್ತಿದಾಯಕ ಯಶೋಗಾಥೆಯನ್ನು ಉಲ್ಲೇಖಿಸಿದರು.
ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳಲ್ಲಿ ಶೇ. 46 ರಷ್ಟು ಮಹಿಳೆಯರಿದ್ದಾರೆ. ದೇಶಾದ್ಯಂತ ಸುಮಾರು 35 ಲಕ್ಷ ಮಹಿಳೆಯರು ಈ ಯೋಜನೆಯೊಂದಿಗೆ ಜೋಡಿಸಿಕೊಂಡು ತಮ್ಮ ಸಣ್ಣ ವ್ಯಾಪಾರ-ವ್ಯವಹಾರಗಳನ್ನು ವಿಸ್ತರಿಸಿಕೊಂಡಿದ್ದಾರೆ. ಮಹಿಳೆಯೊಬ್ಬರ ವ್ಯಾಪಾರ ಬೆಳೆದಾಗ ಇಡೀ ಕುಟುಂಬದ ಭವಿಷ್ಯವೇ ಪ್ರಗತಿ ಕಾಣುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಮನೆಯ ಅಗತ್ಯಗಳು ಪೂರೈಕೆಯಾಗುತ್ತವೆ ಮತ್ತು ಅವರ ಆತಸ್ಥೈರ್ಯ ಹೆಚ್ಚುತ್ತದೆ. ಅದಕ್ಕೆ ಬೆಂಗಳೂರಿನ ಟಿ.ಎಸ್. ನಿಂಗಮ್ಮ ಹಾಗು ಗಾಜಿಯಾಬಾದ್‌ನ ಬಬಿತಾ ಶರ್ಮಾ ಅವರ ಶ್ರಮ ಮಹಿಳಾ ಸಬಲೀಕರಣಕ್ಕೆ ಜೀವಂತ ಸಾಕ್ಷಿ ಎಂದು ಬಣ್ಣಿಸಿದರು.
ಮೂಲತಃ ಹಾಸನ ಜಿಲ್ಲೆಯವರಾದ ಟಿ.ಎಸ್.ನಿಂಗಮ್ಮ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ ಪತಿಯೊಂದಿಗೆ ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಬೀದಿ ಬದಿ ಹೋಟೆಲ್ ಆರಂಭಿಸಿದ್ದಾರೆ.
