ಹಾಸನ: ಹಾಸನಾಂಬ ದರ್ಶನೋತ್ಸವಕ್ಕೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಅನುದಾನ ನೀಡುವಂತೆ ಸರ್ಕಾರಿ ಆದೇಶ ಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಹಾಸನಾಂಬ-ಸಿದ್ದೇಶ್ವರ ದರ್ಶನೋತ್ಸವ ಹಿನ್ನಲೆಯಲ್ಲಿ ದೇಗುಲದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮುಂದಿನ ವರ್ಷದಿಂದ ದೇಗುಲ ಸಮಿತಿಗೆ ಬರುವ ಹಣ ಅಭಿವೃದ್ಧಿಗೆ, ಸರ್ಕಾರ ನೀಡುವ ಹಣ ಸಿದ್ಧತೆ, ಉತ್ಸವಕ್ಕೆ ಬಳಕೆಯಾಗಬೇಕೆಂದರು.
ದೇಗುಲ ಆವರಣ ಪುಷ್ಪಾಲಂಕಾರಕ್ಕೆ ಚಿನ್ನ ಅಂಟಿಸುವುದಿಲ್ಲ. ಹೂವನ್ನು ಅಂಟಿಸುವುದು ನನಗೆ ಗೊತ್ತಿದೆ. ಈ ಕಾಮಗಾರಿಗೆ 32 ಲ.ರೂ. ಕೊಡಲ್ಲ 26 ಲ.ರೂ. ಕೊಡುತ್ತೇನೆ. ಅಲಂಕಾರ ಸರಿ ಇಲ್ಲ ಎಂದರೆ ನಯಾಪೈಸೆ ಕೊಡಲ್ಲ. ಅಲಂಕಾರ ಮಾಡುವುದು ಕಲಿತಿದ್ದಿರಿ ಮಾಡಿ ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು. ದೇಗುಲ ಬಾಗಿಲು ತೆರೆದು ಅಂತಿಮ ದಿನದವರೆಗೆ ನಾನೂ ನಿದ್ರಿಸುವುದಿಲ್ಲ. ಮನೆಗೆ ಹೋಗಲ್ಲ, ತಿರುಗುತ್ತೇನೆಂದರು.

Leave a Reply

Your email address will not be published. Required fields are marked *